ಉಳ್ಳಾಲ ನಗರಸಭೆ: ಜೆಡಿಎಸ್ ನಾಮಪತ್ರ ಸಲ್ಲಿಕೆ

ಉಳ್ಳಾಲ, ಜ.30: ಉಳ್ಳಾಲ ನಗರಸಭೆಯ 24ನೆ ವಾರ್ಡಿಗೆ ಫೆ.12ರಂದು ನಡೆಯುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ ಸೋಮವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಪಕ್ಷದ ಜಿಲ್ಲಾ ಮುಖಂಡ ಅಝೀಝ್ ಮಲಾರ್, ಜೆಡಿಎಸ್ ರಾಜ್ಯ ಮೀನುಗಾರಿಕಾ ಸಮಿತಿ ಅಧ್ಯಕ್ಷ ರತ್ನಾಕರ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಗಣೇಶ್, , ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು, ಹರೇಕಳ ಗ್ರಾಪಂ ಮಾಜಿ ಅಧ್ಯಕ್ಷ ಶಾಲಿಹ್ ಎಚ್. ಹರೇಕಳ, ಉಸ್ಮಾನ್, ಅಕ್ಬರ್ ಉಳ್ಳಾಲ್, ಪುತ್ತುಮೋನು, ಮುನೀರ್ ಮುಕ್ಕಚ್ಚೇರಿ, ರವೀಂದ್ರ ಉಳ್ಳಾಲ, ಖಾಲಿದ್ ಹರೇಕಳ ಉಪಸ್ಥಿತರಿದ್ದರು.
Next Story





