Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿದ್ಯುತ್ ಬಿಲ್ ಪಾವತಿಸದ ಮುಲ್ಕಿ ಸಬ್...

ವಿದ್ಯುತ್ ಬಿಲ್ ಪಾವತಿಸದ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ : ಫ್ಯೂಸ್ ಕಿತ್ತ ಮೆಸ್ಕಾಂ

ವಾರ್ತಾಭಾರತಿವಾರ್ತಾಭಾರತಿ30 Jan 2017 8:59 PM IST
share
ವಿದ್ಯುತ್ ಬಿಲ್ ಪಾವತಿಸದ ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿ : ಫ್ಯೂಸ್ ಕಿತ್ತ ಮೆಸ್ಕಾಂ

ಮುಲ್ಕಿ, ಜ.30: ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯ ಬಿಲ್ ಕಟ್ಟಿಲ್ಲ ಎಂದು ಮೆಸ್ಕಾಂ ಇಲಾಖೆ ವಿದ್ಯುತ್‌ನ ಫ್ಯೂಸ್ ಕೊಂಡು ಹೋಗಿದ್ದು, ದೂರದ ಊರುಗಳಿಂದ ಕೆಲಸಕಾರ್ಯಗಳ ನಿಮಿತ್ತ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಬೆಳಗ್ಗೆ ಬಂದಿದ್ದ ಜನರು ಮಧ್ಯಾಹ್ನದ ವರೆಗೂ ಪರದಾಡಿದ ಘಟನೆ ಸೋಮವಾರ ನಡೆದಿದೆ.

ವಿದ್ಯುತ್ ಬಿಲ್ಲು ಬಾಕಿಯಿರಿಸಿದ ಕಾರಣ ಮೆಸ್ಕಾಂ ಇಲಾಖೆಯವರು ವಿದ್ಯುತ್ ನಿಲುಗಡೆಗೊಳಿಸಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ. ಕಚೇರಿಯಲ್ಲಿರುವ ಜನರೇಟರ್ ಕೂಡಾ ಹಾಳಾಗಿದ್ದು, ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ದೂರದ ಉರುಗಳಿಂದ ನೊಂದಾವಣೆಗೆ ಬಂದ ಹೆಚ್ಚಿನ ಜನರು ಸಮಸ್ಯೆಯಿಂದ ಕಂಗಲಾಗುವಂತಾಯಿತು.

 ಬಳಿಕ ಸಬ್ ರಿಜಿಸ್ಟ್ರಾರ್ ಅವರು ವಿದ್ಯುತ್ ಬಿಲ್ಲು ಪಾವತಿ ಮಾಡಿದ ಬಳಿಕ ಮಧ್ಯಾಹ್ನದ ಅವಧಿಯಲ್ಲಿ ವಿದ್ಯುತ್ ಮರು ಸಂಪರ್ಕ ಕಲ್ಪಿಸಲಾಗಿದೆ. ಜನರೇಟರ್ ಹಾಳಾಗಿದ್ದರೂ ದುರಸ್ತಿ ಮಾಡದಿರುವುದರಿಂದ ಹಾಗೂ ವಿದ್ಯುತ್ ಬಿಲ್ಲು ಕಟ್ಟದಿರುವುದರಿಂದ ಸಮಸ್ಯೆಯಾಗಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಲ್ಕಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಪ್ರತಿ ತಿಂಗಳು ಸುಮಾರು 8 ರಿಂದ 10000 ರೂ ವರೆಗೆ ವಿದ್ಯುತ್ ಬಿಲ್ಲು ಬರುತ್ತಿದ್ದು ಕಚೇರಿಯು ನವಂಬರ್ 2016ರ ವರೆಗೆ 44,000 ರೂ. ವಿದ್ಯುತ್ ಬಿಲ್ಲನ್ನು ಬಾಕಿಯಿರಿಸಿತ್ತು. ಈ ಬಗ್ಗೆ ಮೆಸ್ಕಾಂ ಇಲಾಖೆ ನೋಟಿಸನ್ನೂ ನೀಡಿತ್ತು.

ಬಳಿಕ ನವಂಬರ್ ನಲ್ಲಿ 30,000 ರೂ. ಕಟ್ಟಿ 14,000 ಸಾ.ರೂ ಬಾಕಿಯಿರಿಸಿತ್ತು. ಅಲ್ಲದೆ, ಡಿಸೆಂಬರ್ ತಿಂಗಳಿನ ಬಿಲ್ಲು 9000 ಸೇರಿದಂತೆ ಒಟ್ಟು 23, 000 ಸಾವಿರ ರೂ. ಬಾಕಿಯಿದ್ದು , ಬಿಲ್ಲು ಕಟ್ಟದ ಕಾರಣ ಡಿಸೆಂಬರ್ ತಿಂಗಳಿನ ಅಂತ್ಯದಲ್ಲಿ ವಿದ್ಯುತ್ ನಿಲುಗಡೆಗೊಳಿಸಲಾಗಿತ್ತು.

 ಆ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ರವರು ವಿದ್ಯುತ್ ಬಿಲ್ಲು ಕಟ್ಟುವುದಾಗಿ ತಿಳಿಸಿರುವುದರಿಂದ ಮಾನವೀಯ ನೆಲೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಡಿಸೆಂಬರ್ ಅಂತ್ಯದ ಬಳಿಕ ಜನವರಿ 30ರ ವರೆಗೆ ಬಾಕಿಯುಳಿದ 23, 000 ರೂ. ಕಟ್ಟದ ಹಿನ್ನೆಲೆಯಲ್ಲಿ ಸೋಮವಾರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಕಚೇರಿಯ ಫ್ಯೂಸ್ ಕೊಂಡು ಹೋಗಲಾಗಿತ್ತು.
   
 ಲಕ್ಷಗಟ್ಟಲೆ ಆದಾಯವಿರುವ ಮುಲ್ಕಿ ಸಬ್‌ರಿಜಿಸ್ಟ್ರಾರ್ ಕಚೇರಿಗೆ ಸರಕಾರದಿಂದ ಮಂಜೂರಾಗಿರುವ ಸುಮಾರು 2.5 ಲಕ್ಷ ರೂ. ವೆಚ್ಚದ ಜನರೇಟರ್‌ನಲ್ಲಿ ಪೆಟ್ರೋಲ್ ಮುಗಿದಿದ್ದ ಕಾರಣ ಸೋಮವಾರ ಜನರೇಟರ್ ಚಲಾವಣೆಗೊಳ್ಳದೆ, ಪರ್ಯಾಯ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಯಿತು.

ಈ ಸಂಬಂಧ ಸ್ಥಳದಲ್ಲಿದ್ದ ಕಿನ್ನಿಗೋಳಿಯ ಜೋಸೆಫ್ ಕ್ವಾಡ್ರಸ್ ಪತ್ರಿಕೆಯೊಂದಿಗೆ ಮಾತನಾಡಿ, ಇಂದು ಬೆಳಗ್ಗೆ ರಿಜಿಸ್ಟ್ರೇಶನ್‌ಗೆ ಬಂದಿದ್ದೆವು. ನಾವು ಬರುವ ವೇಳೆ ಇಲ್ಲಿ ವಿದ್ಯುತ್ ಇರಲಿಲ್ಲ. ಜನರೇಟರ್‌ ಕೂಡಾ ಕೆಲಸ ಮಾಡದ ಕಾರಣ ತುಂಬಾ ತೊಂದರೆ ಅನುಭವಿಸಬೇಕಾಯಿತು. ಅಲ್ಲದೆ, ಇಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕನಿಷ್ಠಪಕ್ಷ ಹೊರಗಡೆ ಕುಳಿತುಕೊಳ್ಳುವ ವ್ತವಸ್ಥೆಯೂ ಇಲ್ಲ. ಕೇವಲ ನೋಂದಣಿಗೆ ಹಣ ಸಂಗ್ರಹಿಸಲಾಗುತ್ತಿದೆ ವಿನಃ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

  ಕಚೇರಿಯಲ್ಲಿ ವಿದ್ಯುತ್ ಬಿಲ್ಲು ಕಟ್ಟಲು ಈಗ ಕೆ-12 ಮೂಲಕ ಆನ್ ವ್ಯವಸ್ಥೆ ಮಾಡಿದ್ದು ಇಲಾಖೆಯಿಂದ ಅನುದಾನ ಬಂದಲ್ಲಿ ಮಾತ್ರ ವಿದ್ಯುತ್ ಬಿಲ್ಲು ಕಟ್ಟಲು ಸಾಧ್ಯ. ನೇರವಾಗಿ ಪಾವತಿ ವ್ಯವಸ್ಥೆಯಿಲ್ಲ. ಅನುದಾನ ಬರುವಾಗ ವಿಳಂಬವಾಗಿರುವುದರಿಂದ ವಿದ್ಯುತ್ ಬಿಲ್ಲು ಪಾವತಿಸುವಲ್ಲಿ ಸಮಸ್ಯೆಯಾಗಿತ್ತು. ಜನರೇಟರ್ ಹಾಳಾಗಿರುವುದು ಗಮನಕ್ಕೆ ಬಂದಿರಲಿಲ್ಲ. ಬೆಳಗ್ಗೆ ವಿದ್ಯುತ್ ಬಿಲ್ಲು ಪಾವತಿಸಲಾಗಿತ್ತು. ಮಧ್ಯಾಹ್ನದ ಒಳಗೆ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಿದ್ದು, ಸಮಸ್ಯೆ ಬಗೆಹರಿದಿದೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ.
  
-ಗೋಪಾಲಕೃಷ್ಣ ಸಬ್ ರಿಜಿಸ್ಟಾರ್ ಮುಲ್ಕಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X