21 ಪ್ರಯಾಣಿಕರ ಅಮೆರಿಕ ಪ್ರಯಾಣಕ್ಕೆ ಏರ್ ಫ್ರಾನ್ಸ್ ತಡೆ

ಪ್ಯಾರಿಸ್, ಜ. 30: ಏಳು ಮುಸ್ಲಿಮ್ ದೇಶಗಳ ಪ್ರಯಾಣಿಕರಿಗೆ ಅಮೆರಿಕ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ, 21 ಪ್ರಯಾಣಿಕರು ಅಮೆರಿಕಕ್ಕೆ ಪ್ರಯಾಣಿಸುವುದನ್ನು ಏರ್ ಫ್ರಾನ್ಸ್ ತಡೆಹಿಡಿದಿದೆ.
ನೂತನ ನಿರ್ಬಂಧಗಳ ಬಗ್ಗೆ ಅಮೆರಿಕ ಸರಕಾರವು ಶನಿವಾರ ತನಗೆ ಮಾಹಿತಿ ನೀಡಿತು, ಹಾಗಾಗಿ, ಅಮೆರಿಕಕ್ಕೆ ಪ್ರಯಾಣಿಸುವ ವಿಮಾನಗಳಿಗೆ ಹತ್ತದಂತೆ ಪ್ರಯಾಣಿಕರನ್ನು ತಡೆಯದೆ ಬೇರೆ ಆಯ್ಕೆಯಿರಲಿಲ್ಲ ಎಂದು ಏರ್ ಫ್ರಾನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ 21 ಪ್ರಯಾಣಿಕರನ್ನು ಅವರು ವಿಮಾನ ಹತ್ತಿದ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಅಥವಾ ಅವರ ಯೋಗಕ್ಷೇಮ ನೋಡಿಕೊಳ್ಳಲಾಗಿದೆ ಎಂದು ವಿಮಾನಯಾನ ಕಂಪೆನಿಯ ವಕ್ತಾರೆಯೊಬ್ಬರು ತಿಳಿಸಿದರು. ಆದರೆ, ಅವರು ಪ್ರಯಾಣಿಕರ ಹೆಸರುಗಳು, ರಾಷ್ಟ್ರೀಯತೆ ಅಥವಾ ಇತರ ಮಾಹಿತಿಗಳನ್ನು ನೀಡಲಿಲ್ಲ.
Next Story





