ಉಳಿಯ: ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

ಉಳ್ಳಾಲ , ಜ.30 : ಉಳ್ಳಾಲ ಸಮೀಪದ ಉಳಿಯದಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಮೇಲ್ಛಾವಣೆ ಸಂಪೂರ್ಣ ಸುಟ್ಟು ಅಪಾರ ಹಾನಿ ಸಂಭವಿಸಿದ ಘಟನೆ ನಡೆದಿದೆ.
ಉಳಿಯ ಭಾಸ್ಕರ ಸಪಲ್ಯ ಎಂಬವರ ಹಂಚಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲೆಗೆ ಮನೆಯ ಮೇಲ್ಛಾವಣಿಯು ಸುಟ್ಟು ಹೋಗಿದೆ. ಬೆಂಕಿ ಬಿದ್ದ ತಕ್ಷಣ ಮನೆ ಮಂದಿಗೆ ತಿಳಿದು ಹೊರಗೆ ಓಡಿ ಬಂದಿದ್ದು ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯಿಂದ ಮನೆಯೊಳಗಿದ್ದ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ನಗ, ನಗದು ಹಾಗೂ ಕೆಲವೊಂದಿ ದಾಖಲೆಗಳು ಸುಟ್ಟು ಹೋಗಿದೆ. ಮನೆಗೆ ಹೇಗೆ ಬೆಂಕಿ ತಗುಲಿತು ಎಂಬ ನಿಖರ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





