ಬೈಕ್ ಕಳವು
ಮಂಗಳೂರು, ಜ.30: ನಗರದ ಬಾವುಟಗುಡ್ಡ ಟಾಗೋರ್ ಪಾರ್ಕ್ ಬಳಿ ನಿಲ್ಲಿಸಿದ ಪಲ್ಸರ್ ಬೈಕೊಂದನ್ನು ಕಳವು ಮಾಡಿದ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಮಾಲ್‌ವೊಂದರ ಶಾಪ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯೊಬ್ಬರು ಜ.17ರಂದು ಸಂಜೆ 4ಕ್ಕೆ ಟಾಗೊರ್ ಪಾರ್ಕ್ ಬಳಿ ಬೈಕ್ ನಿಲ್ಲಿಸಿ ಹೋಗಿದ್ದರು. ರಾತ್ರಿ 10 ಗಂಟೆಗೆ ಮರಳಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು ಎನ್ನಲಾಗಿದೆ. ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಜ.30ರಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





