ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ 187-197 ಸ್ಥಾನ
ಎಬಿಪಿ ನ್ಯೂಸ್ ಸಮೀಕ್ಷೆ
ಲಕ್ನೊ, ಜ.30: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ- ಕಾಂಗ್ರೆಸ್ ಮೈತ್ರಿಕೂಟವು 187-197 ಸ್ಥಾನಗಳನ್ನು ಪಡೆದು ಅಗ್ರಸ್ಥಾನ ಪಡೆಯಲಿದೆ. ಬಿಜೆಪಿ 118-128 ಸ್ಥಾನಗಳನ್ನಷ್ಟೇ ಪಡೆಯಲಿದೆ ಎಂದು ಎಬಿಪಿ ನ್ಯೂಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಮಾಯಾವತಿ ಅವರ ಬಿಎಸ್ಪಿ ಪಕ್ಷ 76ರಿಂದ 86 ಸ್ಥಾನ ಗಳಿಸಲಿದೆ. ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟವು ಶೇ.37ರಷ್ಟು ಮತ ಗಳಿಸಿದರೆ, ಬಿಜೆಪಿ ಶೇ.30ರಷ್ಟು, ಬಿಎಸ್ಪಿ ಶೇ.18ರಷ್ಟು ಮತ ಗಳಿಸಲಿದೆ. ಯಾವುದೇ ಪಕ್ಷ ಸರಕಾರ ರಚಿಸಲು ಅಗತ್ಯವಿರುವ ಬಹುಮತ ಪಡೆಯಲು ಶಕ್ತವಾಗದು ಎಂದು ಸಮೀಕ್ಷೆಯ ಫಲಿತಾಂಶ ತಿಳಿಸಿದೆ.
Next Story





