ಫೆ.7ಕ್ಕೆ ಕೇರಳದಲ್ಲಿ ಲಾರಿ ಮುಷ್ಕರ
ಪಾಲಕ್ಕಾಡ್,ಜ.30: ಫೆಬ್ರವರಿ ಏಳಕ್ಕೆ ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳು ಮುಷ್ಕರ ನಡೆಸಲಿವೆ ಎಂದು ಸ್ಟೇಟ್ ಲಾರಿ ಮಾಲಕರ ಸಂಘ ತಿಳಿಸಿದೆ ದೇಶದಲ್ಲಿ ಮೋಟಾರು ವಾಹನ ಕ್ಷೇತ್ರದಲ್ಲಿ ಕೇಂದ್ರ ಸರಕಾರ, ಹಸಿರು ನ್ಯಾಯಮಂಡಲಿ, ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕಾನೂನುಗಳನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಡೀಸೆಲ್ ವಾಹನಗಳನ್ನು ನಿಷೇಧಿಸುವ ಕ್ರಮವನ್ನು ಕೇಂದ್ರ ಸರಕಾರ ಕೈಬಿಡಬೇಕು. ವಾಹನ ನೋಂದಣಿ ಸಹಿತ ಶುಲ್ಕವನ್ನು ಹೆಚ್ಚಿ ಸುವ ಕೇಂದ್ರ ಸರಕಾರದ ನಿರ್ಧಾರ ರದ್ದುಗೊಳಿಸಬೇಕು. ತೈಲಬೆಲೆ ನಿರ್ಧರಿಸುವ ಅಧಿಕಾರವನ್ನು ತೈಲಕಂಪೆನಿಗಳಿಂದ ಹಿಂಪಡೆಯಬೇಕು. ಮೋಟಾರು ವಾಹನ ಇಲಾಖೆಯಲ್ಲಿ ಕೇರಳ ಸರಕಾರ ಜಾರಿಗೆ ತಂದ ಸೇವಾ ಶುಲ್ಕ ರದ್ದುಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸಂಘ ಮುಂದಿಟ್ಟು ಸರಕು ಸಾಗಣೆ ವಾಹನ ಮುಷ್ಕರಕ್ಕೆ ಫೆ.7ರಂದು ನಿರ್ಧರಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story





