ಮಾಯಾವತಿಯನ್ನು ಆರೆಸ್ಸೆಸ್‌ಗೆ ಹೋಲಿಕೆ ಸಲ್ಲ: ರಾಹುಲ್ ಗಾಂಧಿ
.jpg)
ಲಕ್ನೋ,ಜ. 31: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿಯನ್ನು ತಾನು ಗೌರವಿಸುತ್ತೇನೆ ಎಂದಿದ್ದಾರೆ.ಮಾಯಾವತಿಯವರನ್ನು ಆರೆಸ್ಸೆಸ್‌ನೊಂದಿಗೆ ಹೋಲಿಸುವುದು ಸರಿಯಲ್ಲ. ಕಾನ್ಶಿರಾಮ್‌ರನ್ನು ಗೌರವಿಸುವಂತೆ ಮಾಯಾವತಿಯವರನ್ನು ಕೂಡಾ ವೈಯಕ್ತಿಕವಾಗಿ ಬಹಳ ಗೌರವಿಸುತ್ತೇನೆ ಎಂದು ಅಖಿಲೇಶ್‌ರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ರಾಹುಲ್ ಅಭಿಪ್ರಾಯಿಸಿದ್ದಾರೆ. ಉತ್ತರಪ್ರದೇಶದಲ್ಲಿ ಬಿಎಸ್ಪಿ ಸರಕಾರ ನಡೆಸಿದೆ ಮತ್ತು ಕೆಲವು ತಪ್ಪುಗಳನ್ನು ಮಾಡಿದೆ. ಆದರೆ ಮಾಯಾವತಿಯವರಲ್ಲಿ ನನಗೆ ತುಂಬ ಗೌರವ ಇದೆ. ಬಿಎಸ್ಪಿ ಮತ್ತು ಬಿಜೆಪಿಗೆ ತುಂಬ ವ್ಯತ್ಯಾಸವಿದೆ ಎಂದು ರಾಹುಲ್ ಹೇಳಿದ್ದಾರೆ.
ಬಿಜೆಪಿ ಕ್ರೋಧ ಮತ್ತು ವೈರವನ್ನು ಹರಡುತ್ತದೆ. ಪರಸ್ಪರ ಭಾರತೀಯರನ್ನು ಹೊಡೆದಾಡುವಂತೆ ಮಾಡುತ್ತಿದೆ. ಅವರ ವಿಚಾರಧಾರೆ ದೇಶಕ್ಕೆ ಅಪಾಯಕಾರಿಯಾಗಿದೆ. ಮಾಯಾವತಿಯವರ ವಿಚಾರಧಾರೆಯಿಂದ ದೇಶಕ್ಕೆ ಅಪಾಯವಿಲ್ಲ. ದೇಶ ಮುಂದುವರಿಯಲು ಪ್ರತಿಯೊಂದು ಧರ್ಮೀಯರು ಒಗ್ಗಟ್ಟಿನಲ್ಲಿರಬೇಕು. ಈ ದೇಶವನ್ನು ಒಡೆದು ಮುಂದಕ್ಕೊಯ್ಯಲು ಸಾಧ್ಯವಿಲ್ಲ. ಆದ್ದರಿಂದ ಮಾಯಾವತಿ ಹಾಗೂ ಆರೆಸ್ಸೆಸನ್ನು ಪರಸ್ಪರ ಹೋಲಿಸಬಾರದು. ಬಿಜೆಪಿಯನ್ನು ಸೋಲಿಸಲು ಎಲ್ಲ ಜಾತ್ಯತೀತ ಶಕ್ತಿಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕಿದೆ ಎಂದು ರಾಹುಲ್ ಹೇಳಿದರು. "ಈ ಮೈತ್ರಿಯಲ್ಲಿ ಮಾಯಾವತಿ ಬಹಳ ಹೆಚ್ಚು ಸ್ಥಾನ ಕೇಳುತ್ತಿದ್ದಾರೆ. ಅಷ್ಟು ಸ್ಥಾನವನ್ನು ನಾನು ಹಾಗೂ ರಾಹುಲ್ ನೀಡಲು ಸಾಧ್ಯವಾಗಿಲ್ಲ" ಎಂದು ಅಖಿಲೇಶ್ ಯಾದವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆಂದು ವರದಿ ತಿಳಿಸಿದೆ.







