ಭಾರತದ ಆರ್ಥಿಕತೆ ಶೇ.6.75-7.5ರಷ್ಟು ಏರಿಕೆ ನಿರೀಕ್ಷೆ : ಸಚಿವ ಜೇಟ್ಲಿ

ಹೊಸದಿಲ್ಲಿ, ಜ.31: ಭಾರತದ ಆರ್ಥಿಕತೆ 2017-18 ನೇ ಸಾಲಿನಲ್ಲಿ ಶೇ.6.75-7.5ರಷ್ಟು ಏರಿಕೆಯ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
ಸಂಸತ್ ನಲ್ಲಿ ಇಂದು 2017-18 ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಿದರು. ಪ್ರಧಾನ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ ತಂಡ ಆರ್ಥಿಕ ಸಮೀಕ್ಷಾ ವರದಿಯನ್ನು ತಯಾರಿಸಿದೆ.
ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸುಗಳು ಆರ್ಥಿಕ ಸಮೀಕ್ಷೆ ವರದಿಯಲ್ಲಿದೆ. ಫೆ.೧ರಂದು ಸಂಸತ್ತಿನಲ್ಲಿ ಕೇಂದ್ರ ರೈಲ್ವೇ ಮತ್ತು ಸಾಮಾನ್ಯ ಬಜೆಟ್ ಒಟ್ಟಿಗೆ ಮಂಡನೆಯಾಗಲಿದೆ.
Next Story





