ಆರೆಸ್ಸೆಸ್ ಬೈಠಕ್‌ಗೆ ದಾಳಿ: ಆರೆಸ್ಸೆಸ್ ನಾಯಕನ ಸಹಿತ ಇಬ್ಬರಿಗೆ ಗಾಯ

ಪಯ್ಯನ್ನೂರ್,ಜ.31: ಆರೆಸ್ಸೆಸ್ ಸಂಘ ಬೈಠಕ್ ನಡೆಯುತ್ತಿದ್ದ ವೇಳೆ ಗುಂಪೊಂದು ದಾಳಿ ನಡೆಸಿದ್ದು, ಆರೆಸ್ಸೆಸ್ ಸ್ಥಳೀಯ ನಾಯಕ ಹಾಗೂ ಕಾರ್ಯಕರ್ತನಿಗೆ ಗಾಯಗಳಾಗಿವೆ. ಆರೆಸ್ಸೆಸ್ ತಾಲೂಕ್ ಕಾರ್ಯನಿರ್ವಾಹಕ್ ಪಿಲಾತ್ತರ ಸಜಿತ್(22),ಕರಿವೆಳ್ಳೂರ್ ರಂಜಿತ್(30) ಗುಂಪಿನ ಹಲ್ಲೆಯಿಂದ ಗಾಯಗೊಂಡಿದ್ದು, ಇವರಲ್ಲಿ ಗಂಭೀರ ಗಾಯಗಳಾಗಿರುವ ಸಜಿತ್‌ನನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ ಎಂಟುಗಂಟೆಗೆ ಘಟನೆ ನಡೆದಿದೆ. ಕಾಂಕೋಲ್ ಶಿವಕ್ಷೇತ್ರ ಸಮೀಪದ ಕೈಲಾಸ್ ಆಡಿಟೋರಿಯಂನಲ್ಲಿ ಆರೆಸ್ಸೆಸ್ ಬೈಠಕ್ ನಡೆಯುತ್ತಿದ್ದಾಗ ಅಲ್ಲಿಗೆ ಧಾವಿಸಿದ ಗುಂಪು ಹಲ್ಲೆಎಸಗಿದೆ ಎಂದು ತಿಳಿದು ಬಂದಿದೆ.
ಸಜಿತ್‌ರ ತಲೆಹಾಗೂ ಎರಡು ಕಾಲುಗಳು ಜಖಂ ಆಗಿದೆ. ಅವರನ್ನು ಮೊದಲು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇಲ್ಲಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿತಿಳಿಸಿದೆ. ಡಿವೈಎಫ್‌ಐ ಕಾರ್ಯಕರ್ತರು ಹಲ್ಲೆಎಸಗಿದ್ದೆಂದು ಆರೆಸ್ಸೆಸ್ ನಾಯಕರು ಆರೋಪಿಸಿದ್ದಾರೆ.





