ಫೆ. 4ರಂದು ಆಳ್ವಾಸ್‌ನಲ್ಲಿ ಪ್ರಸನ್ನರ ' ಸ್ವರಾಜ್ಯದಾಟ '

ಮೂಡುಬಿದಿರೆ , ಜ.31 : ಪ್ರಸಿದ್ಧ ರಂಗನಿರ್ದೇಶಕ ಪ್ರಸನ್ನ ಹೆಗ್ಗೋಡು ರಚಿಸಿ ನಿರ್ದೇಶಿಸಿದ ಸ್ವರಾಜ್ಯದಾಟ ನಾಟಕವು ಫೆಬ್ರವರಿ 4ರಂದು ಆಳ್ವಾಸ್ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿ ಆಧಾರಿತ ಈ ನಾಟಕವನ್ನು ರಂಗವಲ್ಲಿ ಮೈಸೂರು ತಂಡದವರು ಅಭಿನಯಿಸಲಿದ್ದಾರೆ.
ಒಟ್ಟು 2 ಪ್ರದರ್ಶನಗಳಿದ್ದು ಸಂಜೆಗಂಟೆ 4ಕ್ಕೆ ಮತ್ತು ಸಂಜೆಗಂಟೆ 6.30ಕ್ಕೆ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಪ್ರವೇಶ ಉಚಿತ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ತಿಳಿಸಿದ್ದಾರೆ.
Next Story





