ದೋಷಯುಕ್ತ ಏರ್‌ಬ್ಯಾಗ್ ಬದಲಾವಣೆಗಾಗಿ 41,580 ಹೊಂಡಾ ಕಾರುಗಳು ವಾಪಸ್

ಹೊಸದಿಲ್ಲಿ,ಜ.31: ದೋಷಯುಕ್ತ ಏರ್ ಬ್ಯಾಗ್‌ಗಳನ್ನು ಬದಲಾಯಿಸಲು ಜಪಾನಿನ ಪ್ರಮುಖ ಕಾರು ತಯಾರಿಕೆ ಸಂಸ್ಥೆ ಹೊಂಡಾ ಭಾರತದಲ್ಲಿಯ ತನ್ನ ಅಕಾರ್ಡ್, ಸಿವಿಕ್, ಸಿಟಿ ಮತ್ತು ಜಾಝ್ ಮಾಡೆಲ್‌ಗಳ ಹಿಂದಿನ ಆವೃತ್ತಿಗಳ 41,580 ಕಾರುಗಳನ್ನು ವಾಪಸ್ ಕರೆಸಲು ಉದ್ದೇಶಿಸಿದೆ.
ಇದರೊಂದಿಗೆ ಜಪಾನಿನ ತಕಾಟಾ ಕಾರ್ಪ್ ತಯಾರಿಕೆಯ ಏರ್‌ಬ್ಯಾಗ್‌ಗಳನ್ನು ಹೊಂದಿರುವ,ಬದಲಾವಣೆಗಾಗಿ ವಾಪಸ್ ಕರೆಸಲಾದ ಭಾರತದಲ್ಲಿಯ ಹೊಂಡಾ ಕಾರುಗಳ ಸಂಖ್ಯೆ ಸುಮಾರು ಮೂರು ಲಕ್ಷದಷ್ಟಾಗಲಿದೆ.
2012ರಲ್ಲಿ ತಯಾರಾದ ಕಾರುಗಳಿಗೆ ಅಳವಡಿಸಲಾಗಿರುವ ಏರ್‌ಬ್ಯಾಗ್‌ಗಳನ್ನು ಬದಲಿಸಲಾಗುತ್ತಿದ್ದು, ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಹೊಂಡಾ ಕಾರ್ಸ್ ಇಂಡಿಯಾ ಲಿ.ತಿಳಿಸಿದೆ.
ಕಳೆದ ವರ್ಷದ ಜುಲೈನಲ್ಲಿ ಕಂಪನಿಯು ತನ್ನ 1,90,578 ಕಾರುಗಳಲ್ಲಿಯ ದೋಷಯುಕ್ತ ಏರ್ ಬ್ಯಾಗ್‌ಗಳನ್ನು ಬದಲಾಯಿಸಿತ್ತು.
Next Story





