ಟ್ರಂಪ್ ‘ಮುಸ್ಲಿಂ ಬ್ಯಾನ್’ ನೀತಿ; ಭಾರತದ ಅಥ್ಲೀಟ್‌ಗೆ ವೀಸಾ ನಿರಾಕರಣೆ

ಹೊಸದಿಲ್ಲಿ, ಜ.31: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಮುಸ್ಲಿಂ ಬ್ಯಾನ್’ ನೀತಿಯಿಂದಾಗಿ ಮೊದಲ ಬಾರಿ ಭಾರತದ ಅಥ್ಲೀಟ್ ಒಬ್ಬರು ಸಮಸ್ಯೆ ಎದುರಿಸುವಂತಾಗಿದೆ.
ಕಾಶ್ಮೀರ ಮೂಲದ ಸ್ನೋಶೂ ಅಥ್ಲೀಟ್ 24ರ ಹರೆಯದ ತನ್ವೀರ್ ಹುಸೈನ್‌ಗೆ ಅಮೆರಿಕದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ವೀಸಾ ನಿರಾಕರಿಸಲಾಗಿದೆ.
ತನ್ವೀರ್ ಹುಸೈನ್ ಅಮೆರಿಕ ದೇಶಕ್ಕೆ ತೆರಳಲು ವೀಸಾಕ್ಕೆ ಅರ್ಜಿ ಹಾಕಿದ್ದರು. ಆದರೆ ಹೊಸದಿಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯು ವೀಸಾ ನಿರಾಕರಿಸಿದೆ ಎಂದು ಹೇಳಿದ್ದಾರೆ.
‘‘ ವೀಸಾ ಅಧಿಕಾರಿ ಐದು ನಿಮಿಷಗಳ ಕಾಲ ವೀಸಾಕ್ಕೆ ಸಂದರ್ಶನ ನಡೆಸಿದರು. ಸ್ಫೋರ್ಟ್‌ನ ಬಗ್ಗೆ ಕೇಳಿದರು. ಅನಂತರ ಆ ಮಹಿಳಾ ಅಧಿಕಾರಿ ಒಳಗೆ ಹೋಗಿ ಯಾರಲ್ಲೋ ಮಾತನಾಡಿದರು. ಮತ್ತೆ ವಾಪಸ್ ಬಂದು ಅಮೆರಿಕದ ಹೊಸ ನೀತಿಯಂತೆ ನಿಮಗೆ ವೀಸಾ ನೀಡಲು ನನ್ನಿಂದ ಸಾಧ್ಯವಿಲ್ಲ ’’ ಎಂದು ತಿಳಿಸಿದರು ಎಂದು ಅವರು ಸುದ್ದಿ ವೆಬ್‌ಸೈಟ್‌ವೊಂದಕ್ಕೆ ಮಾಹಿತಿ ನೀಡಿದ್ದಾರೆ.
ತನ್ವೀರ್ ಅವರಂತೆ ಆಬಿದ್ ಖಾನ್ ಅವರಿಗೂ ವೀಸಾ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.







