ಪುತ್ತೂರು ನಗರಸಭಾ ಉಪಚುನಾವಣೆ: ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಪುತ್ತೂರು, ಜ.31: ಪುತ್ತೂರು ನಗರಸಭೆಯ 6 ವಾರ್ಡ್‌ಗಳಿಗೆ ಫೆ.12ರಂದು ನಡೆಯಲಿರುವ ಉಪಚುನಾವಣೆಗೆ ಬಿಜೆಪಿಯಿಂದ 6 ಮತ್ತು ಕಾಂಗ್ರೆಸ್‌ನಿಂದ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ವಾರ್ಡ್ ನಂ.6ಕ್ಕೆ ಸುಂದರ ಪೂಜಾರಿ, ವಾರ್ಡ್ ನಂ.16ಕ್ಕೆ ಶ್ಯಾಮಲಾ ವಸಂತ ಬಪ್ಪಳಿಗೆ, 19ನೆ ವಾರ್ಡ್‌ಗೆ ವೀಣಾ ಚಿದಾನಂದ ಅಚಾರ್ಯ, 21ನೆ ವಾರ್ಡ್‌ಗೆ ಅಹಲ್ವಾ ಕರುಣಾಕರ, 22ನೆ ವಾರ್ಡ್‌ಗೆ ವಿಜಯಲಕ್ಷ್ಮೀ ಸುರೇಶ್ ಮತ್ತು 26ನೆ ವಾರ್ಡ್‌ಗೆ ರಮೇಶ್ ರೈ ಮೊಟ್ಟೆತ್ತಡ್ಕ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಉಷಾ ಅಚಾರ್ಯ ನಾಮಪತ್ರ ಸಲ್ಲಿಸಿದರು.
Next Story





