ಫೆ.3ರಿಂದ ಚಲನಚಿತ್ರೋತ್ಸವ ಸಪ್ತಾಹ
ಉಚಿತ ವೀಕ್ಷಣೆಗೆ ಅವಕಾಶ
ಉಡುಪಿ, ಜ.31: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ವತಿಯಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಪ್ರದರ್ಶನ ‘ಚಲನ ಚಿತ್ರೋತ್ಸವ ಸಪ್ತಾಹ’ ಕಾರ್ಯಕ್ರಮ ಫೆ.3ರಿಂದ 9ರವರೆಗೆ ಉಡುಪಿಯ ಡಯಾನ ಚಿತ್ರಮಂದಿರದಲ್ಲಿ ನಡೆಯಲಿದ್ದು, ಚಲನಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಚಿತ್ರೋತ್ಸವ ಸಪ್ತಾಹದಲ್ಲಿ ಪ್ರತಿದಿನ ಬೆಳಗ್ಗೆ 10ಕ್ಕೆ ಪ್ರದರ್ಶನ ಆರಂಭಗೊಳ್ಳಲಿದ್ದು (ದಿನಕ್ಕೆ ಒಂದು ಪ್ರದರ್ಶನ ಮಾತ್ರ), ಫೆ.3ರಂದು ಮೈತ್ರಿ, ಫೆ.4ರಂದು ಶಿವಯೋಗಿ ಶ್ರೀ ಪುಟ್ಟಯ್ಯಜ್ಜ, ಫೆ.5ರಂದು ತಿಥಿ, 6ರಂದು ಕೃಷ್ಣಲೀಲಾ, 7ರಂದು ರಂಗಿ ತರಂಗ, ಫೆ.8ರಂದು ತಿಥಿ ಹಾಗೂ 9ರಂದು ಮೈತ್ರಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ವೀಕ್ಷಿಸುವಂತೆ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ತಿಳಿಸಿದ್ದಾರೆ.
Next Story





