ನೀರಿನ ಶಿತಲೀಕರಣ ಘಟಕ ನಿರ್ವಹಣೆಗೆ ಆಗ್ರಹ

ಉಡುಪಿ, ಜ.31: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಕುಡಿಯುವ ನೀರಿನ ಶಿತಲೀಕರಣ ಘಟಕಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಅಳವಡಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಸೋಮವಾರ ಉಡುಪಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ನೀರಿನ ಘಟಕವು ಕಳೆದ ಹಲವು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆ ಈ ಶೀತಲೀಕರಣ ಯಂತ್ರವನ್ನು ಸ್ಥಳೀಯ ದಾನಿಗಳು ಸರಿ ಪಡಿಸಿದ್ದರು. ಆದರೆ ನೀರಿನ ಮತ್ತು ವಿದ್ಯುತ್ ಸಂಪರ್ಕ ಇಲ್ಲದೆ ಈ ಘಟಕದಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಇನ್ನು ಮುಂದೆ ಇದರ ನಿರ್ವಹಣೆಯನ್ನು ಉಡುಪಿ ನಗರಸಭೆಯೇ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್, ಆಶ್ರಯದಾತ ಕೆ.ರಮೇಶ್ ಶೆಟ್ಟಿ, ಯಶೋಧರ್ ಭಂಡಾರಿ, ಸಾಯಿರಾಜ್ ಶೆಟ್ಟಿ ಕಾಪು, ಝೈನುಲ್ ಆಬಿದಿನ್, ಶಿವ ಭಂಡಾರಿ, ಸಂತೋಷ್ ಕುಮಾರ್, ಗಣೇಶ್, ಭಾಸ್ಕರ್ ಜೋಷಿ ಮೊದಲಾದವರು ಹಾಜರಿದ್ದರು.
Next Story





