ವ್ಯಕ್ತಿಯ ಕೊಲೆ: ಓರ್ವನ ಬಂಧನ; ಮತ್ತೋರ್ವ ಪರಾರಿ
.jpg)
ಕಾಸರಗೋಡು, ಜ.31: ಹಳೆಯ ಚಿನ್ನಾಭರಣದ ವಹಿವಾಟುನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಕೊಲೆಗೈದು ಪಾಳು ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ಯಾನ ನಿವಾಸಿಯಾಗಿರುವ ಓರ್ವನನ್ನು ಕಾಸರಗೋಡು ಪೊಲೀಸರ ವಿಶೇಷ ತನಿಖಾ ತಂಡ ಬಂಸಿದೆ.
ಆರೋಪಿಯನ್ನು ಕನ್ಯಾನ ಕರೋಪಾಡಿ ಮಿತ್ತನಡ್ಕದ ಅಬ್ದುಲ್ ಸಲಾಂ(30) ಎಂದು ಗುರು ತಿಸಲಾಗಿದೆ. ಇನ್ನೋರ್ವ ಆರೋಪಿ ಅಶ್ರ್ ತಲೆ ಮರೆಸಿಕೊಂಡಿದ್ದಾನೆ.
ಅಶ್ರ್ ಮೂಲತಃ ತಮಿಳುನಾಡಿನವನಾಗಿದ್ದು, ತನಿಖೆಯನ್ನು ತಮಿಳುನಾಡಿಗೆ ವಿಸ್ತರಿಸಿದೆ. ಕಾಸರಗೋಡು ವಿದ್ಯಾನಗರ ಚೆಟ್ಟುಂಗುಳಿಯ ಮನ್ಸೂರ್ ಅಲಿ(42)ಎಂಬವರನ್ನು ಜ.25 ರಂದು ಅಪಹರಿಸಿ, ಕೊಲೆ ಮಾಡಿದ ತಂಡವು ಉಪ್ಪಳ ಸಮೀಪದ ಬಾಯಾರು ಸುಣ್ಣಾಡ ಎಂಬಲ್ಲಿನ ಪಾಳು ಬಾವಿಗೆ ಎಸೆದು ಪರಾರಿಯಾಗಿತ್ತು ಎಂದು ತಿಳಿದು ಬಂದಿದೆ.
ಸ್ಥಳೀಯರು ಬಾವಿ ಬಳಿ ರಕ್ತದ ಕಲೆ ಹಾಗೂ ವಾಹನದ ಗಾಜು ಹುಡಿಯಾಗಿ ಬಿದ್ದಿರುವುದನ್ನು ಗಮನಿಸಿ ಬಾವಿಯನ್ನು ಗಮನಿಸಿದಾಗ ಮೃತದೇಹ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಲಾಗಿದೆ.
ಸ್ಥಳೀಯ ಮನೆಯೊಂದರ ಸಿಸಿ ಟಿವಿ ದ್ರಶ್ಯ ಹಾಗೂ ಮೊಬೈಲ್ಗೆ ಬಂದ ಕರೆಗಳ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಸುಳಿವು ಪಡೆದು ಓರ್ವನನ್ನು ಬಂಸಿದ್ದಾರೆ. ಕೃತ್ಯದ ಬಳಿಕ ಆರೋಪಿ ಉಳ್ಳಾಲಕ್ಕೆ ಪರಾರಿಯಾಗಿದ್ದನು ಎನ್ನಲಾಗಿದೆ. ಮರುದಿನ ಮಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದು, ಪೊಲೀ ಸರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದನು ಎಂದು ತಿಳಿದು ಬಂದಿದೆ. ಈ ನಡುವೆ ಆರೋಪಿ ಅಬ್ದುಲ್ ಸಲಾಂ ಮನೆಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ದೋಚುವ ಉದ್ದೇಶದಿಂದ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇರೆ ಯಾವುದೇ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ ಮನ್ಸೂರ್ ಅಲಿ ಮತ್ತು ಕೊಲೆ ಆರೋಪಿ ಅಬ್ದುಲ್ ಸಲಾಂ ಒಂದೂವರೆ ವರ್ಷದ ಹಿಂದೆ ಉಪ್ಪಳದ ಹಣಕಾಸು ಸಂಸ್ಥೆಯೊಂದರಲ್ಲಿ ಚಿನ್ನಾಭರಣ ಅಡವಿಡಲು ಬಂದ ಸಂದರ್ಭದಲ್ಲಿ ಪರಿಚಯವಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಬಳಿಕ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಉಂಟಾಗಿ ನಾಲ್ಕು ಬಾರಿ ಚಿನ್ನಾಭರಣದ ವಹಿವಾಟು ನಡೆಸಿದ್ದರು ಎನ್ನಲಾಗಿದೆ.
ಈ ನಡುವೆ ಅಬ್ದುಲ್ ಸಲಾಂ ತನ್ನ ಸ್ನೇಹಿತ ಆಟೊ ಚಾಲಕ ಅಶ್ರ್ ಎಂಬಾತನೊಂದಿಗೆ ಸೇರಿ ಹಣ ದೋಚುವ ಉದ್ದೇಶದಿಂದ ಮನ್ಸೂರ್ ಅಲಿಯವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದರಂತೆ ಜ.25ರಂದು ಮುಹಮ್ಮದ್ ಮನ್ಸೂರ್‌ಗೆ ಕರೆ ಮಾಡಿದ ಅಬ್ದುಲ್ ಸಲಾಂ ತನ್ನ ಬಳಿ 25 ಪವನ್ ಚಿನ್ನಾಭರಣ ಮಾರಾಟಕ್ಕಿದ್ದು, ಬಾಯಾರಿಗೆ ಬರುವಂತೆ ತಿಳಿಸಿದ್ದನು ಎನ್ನಲಾಗಿದೆ.
ಇದರಂತೆ ಕಾಸರಗೋಡಿನ ಕರಂದಕ್ಕಾಡ್ ತನಕ ಸ್ಕೂಟರ್‌ನಲ್ಲಿ ಬಂದ ಮನ್ಸೂರ್ ಅಲ್ಲಿಂದ ಬಸ್‌ಮೂಲಕ ಉಪ್ಪಳ ಕೈಕಂಬಕ್ಕೆ ಬಂದು ಬಾಯಾರಿಗೆ ತಲಪಿದ್ದರು. ಅಲ್ಲಿಂದ ಅಶ್ರ್ನ ಓಮ್ನಿಯಲ್ಲಿ ಬಾಯಾರು ಮುಳಿಗದ್ದೆ ಸಮೀಪದ ಚಕ್ಕರಗುಳಿ ಎಂಬಲ್ಲಿನ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ ಮನ್ಸೂರ್ ಅಲಿಯವರ ಮುಖಕ್ಕೆ ಮೆಣಸಿನ ಹುಡಿ ಎರಚಿ, ಕಬ್ಬಿಣದ ರಾಡ್‌ನಿಂದ ತಲೆಗೆ ಬಡಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ಮನ್ಸೂರ್ ಅಲಿ ಓಡಲೆತ್ನಿಸಿದರೂ ಬೆನ್ನಟ್ಟಿ ತಲೆಗೆ ಹೊಡೆದು ಕುಸಿದು ಬಿದ್ದ ಅವರನ್ನು 100 ಮೀಟರ್ ದೂರದ ಲ್ಲಿರುವ ಪಾಳು ಬಾವಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆ ನಡೆಸುವ ಮೊದಲು ವ್ಯಾನ್‌ನಲ್ಲಿಯೇ ಮನ್ಸೂರ್ ಅಲಿ ಬಳಿ ಇದ್ದ ಐದೂವರೆ ಲಕ್ಷ ರೂ. ಒಳಗೊಂಡ ಬ್ಯಾಗನ್ನು ಇಬ್ಬರೂ ವಶಕ್ಕೆ ತೆಗೆದು ಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಒಂದೂವರೆ ಲಕ್ಷ ರೂ. ಸಲಾಂಗೆ ನೀಡಿದ ಬಳಿಕ ಉಳಿದ ಮೊತ್ತ ಸಹಿತ ಅಶ್ರ್ ಅಲ್ಲಿಂದ ತೆರಳಿದ್ದನು ಎಂದು ತಿಳಿದು ಬಂದಿದೆ.
ಪೊಲೀಸರು ಅಶ್ರ್ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ.







