ಅಹ್ಮದ್ ನಿಧನದ ಘೋಷಣೆಯಲ್ಲಿ ಕೇಂದ್ರದಿಂದ ‘ಅಮಾನವೀಯ ವರ್ತನೆ’: ಖರ್ಗೆ

ಹೊಸದಿಲ್ಲಿ, ಫೆ.1: ಹಿರಿಯ ಸಂಸದ ಇ.ಅಹ್ಮದ್ ಅವರ ನಿಧನದ ಘೋಷಣೆಯನ್ನು ಕೇಂದ್ರ ಉದ್ದೇಶಪೂರ್ವಕವಾಗಿ ವಿಳಂಬಿಸಲು ಯತ್ನಿಸಿದೆ ಎಂದು ಆರೋಪಿಸಿರುವ ವಿಪಕ್ಷ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸರಕಾರಕ್ಕೆ ಬಜೆಟ್ ಮುಂದೂಡುವ ಮನಸ್ಸಿರಲಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದಿದ್ದಾರೆ.
ಕೇಂದ್ರ ಬಜೆಟ್ ಮಂಡನೆಗಿಂತ ಮೊದಲು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಕೇಂದ್ರ ಈ ವಿಚಾರದಲ್ಲಿ ಅಮಾನವೀಯವಾಗಿ ವರ್ತಿಸಿದೆ ಎಂದರು.
‘‘ಜೆಡಿಯು ನಾಯಕರು, ಮಾಜಿ ಪ್ರಧಾನಿ ದೇವೇ ಗೌಡ ಸಹಿತ ನಮ್ಮ ಅಭಿಪ್ರಾಯದಲ್ಲಿ ಬಜೆಟನ್ನು ಮುಂದೂಡಬೇಕು’’ಎಂದು ಖರ್ಗೆ ಆಗ್ರಹಿಸಿದ್ದರು. ಮಾಜಿ ಕೇಂದ್ರ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇ.ಅಹ್ಮದ್ ಅವರು ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಮಂಗಳವಾರ ಬಜೆಟ್ ಅಧಿವೇಶನದ ಮುನ್ನಾದಿನ ರಾಷ್ಟ್ರಪತಿಗಳು ಸಂಸತ್ತನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಅಹ್ಮದ್ ಕುಸಿದು ಬಿದ್ದಿದ್ದರು.
Next Story





