ಬುರ್ಖಾ ನಿಷೇಧದೆಡೆಗೆ ಆಸ್ಟ್ರೀಯ ದಾಪುಗಾಲು

ವಿಯನ್ನಾ,ಫೆ.1: ಶಾಲೆಗಳು, ಕೋರ್ಟು ಮುಂತಾದ ಸ್ಥಳಗಳಲ್ಲಿ ಮುಖಾವರಣ ನಿಷೇಧಿಸಲು ಆಸ್ಟ್ರೀಯನ್ ಸರಕಾರ ನಿರ್ಧರಿಸಿದ್ದು ದೇಶದ ಪ್ರಗತಿವಾದಿ ನಿಲುವನ್ನು ಅನುಸರಿಸಲು ಸಿದ್ಧರಿಲ್ಲದಿದ್ದರೆ ದೇಶ ತೊರೆದು ಹೋಗಬೇಕೆಂದು ಅಲ್ಲಿನ ಮೈತ್ರಿಸರಕಾರ ಹೇಳಿಕೆ ನೀಡಿದೆ.
ಚುನಾವಣೆಯಿದ್ದು ಇಂತಹದೊಂದು ತೀರ್ಮಾನಕ್ಕೆ ಅಲ್ಲಿನ ಸರಕಾರ ಹೊರಟಿದೆ ಎನ್ನಲಾಗುತ್ತಿದೆ. " ತೆರೆದ ಸಂವಾದಗಳು ನಡೆಯುವ ಒಂದು ತೆರೆದ ಸಮಾಜದಲ್ಲಿ ನಾವು ವಿಶ್ವಾಸವನ್ನು ಹೊಂದಿದ್ದೇವೆ. ಶರೀರ ಇಡೀ ಮುಚ್ಚುವ ವಸ್ತ್ರವಿಧಾನ ಈ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅದನ್ನು ನಾವು ನಿಷೇಧಿಸಬೇಕಿದೆ" ಎಂದು ಮೂವತ್ತೈದು ಪುಟಗಳ ಹೇಳಿಕೆಯಲ್ಲಿ ಅಲ್ಲಿ ಸರಕಾರ ತಿಳಿಸಿದೆ. ಶರೀರ ಮುಚ್ಚುವ ಬಟ್ಟೆಯೆಂದು ಮುಸ್ಲಿಮರ ಹಿಜಾಬನ್ನು ಉದ್ದೇಶಿಸಲಾಗಿದೆ. ಹಿಜಾಬ್ ನಿಖಾಬನ್ನು ನಿಷೇಧಿಸುವ ಹುನ್ನಾರವಿದು.
ಪೊಲೀಸಧಿಕಾರಿಗಳು, ನ್ಯಾಯಾಧೀಶರು, ಸರಕಾರಿ ವಕೀಲರು ತಲೆ ಮುಚ್ಚುವ ಧಾರ್ಮಿಕ ಉಡುಪು ಧರಿಸುವುದಕ್ಕೆ ಆಸ್ಟ್ರೀಯದಲ್ಲಿ ನಿಷೇಧವಿದೆ. ದೇಶದ ಫ್ರೀಡಂ ಪಾರ್ಟಿಗೆ ಮುನ್ನಡೆ ದೊರೆಯಲಿದೆ ಎನ್ನುವ ಸಮೀಕ್ಷೆ ಆಳುವ ಮೈತ್ರಿಕೂಟ ಸರಕಾರಕ್ಕೆ ಇಂತಹ ಆದೇಶ ಹೊರಡಿಸಲು ಪ್ರೇರೆಪಿಸಿದೆ.
ಬುರ್ಖಾ ನಿಕಾಬ್ ಧರಿಸುದಂತೆ ನಿಷೇಧ ಹೇರಿದ ಮೊದಲ ದೇಶ ಯುರೋಪಿನಲ್ಲಿ ಫ್ರಾನ್ಸ್ ಆಗಿದೆ. ನಂತರ ಬೆಲ್ಜಿಯಂ ಆ ದಾರಿ ಹಿಡಿಯಿತು. ಕಳೆದ ಡಿಸೆಂಬರ್‌ನಲ್ಲಿ ಜರ್ಮನಿ ಚಾನ್ಸಲರ್ ಆಂಜೆಲ ಮರ್ಕಲ್ ಇಂತಹ ಒಂದು ಅಗತ್ಯದೊಂದಿಗೆ ರಂಗಪ್ರವೇಶಿಸಿದ್ದರು ಎಂದು ವರದಿ ತಿಳಿಸಿದೆ.







