ಮಂಗಳೂರಿನಲ್ಲಿ ಬಾಗಲಕೋಟೆ ವ್ಯಕ್ತಿ ಆತ್ಮಹತ್ಯೆ
ಮಂಗಳೂರು, ಫೆ.1: ಬಾಗಲಕೋಟೆಯ ವ್ಯಕ್ತಿಯೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಣ್ಣಗುಡ್ಡೆಯಲ್ಲಿ ಬುಧವಾರ ನಡೆದಿದೆ.
ಪರಸಪ್ಪ( 35) ಮೃತಪಟ್ಟ ವ್ಯಕ್ತಿ. ಈತ ಮದ್ಯಪಾನದ ಚಟ ಹೊಂದಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ನೇಣಿಗೆ ಶರಣಾಗಿಡುವ ಶಂಕೆ ವ್ಯಕ್ತಪಡಿಸಲಾಗಿದೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





