ಇನ್ನು ನೀವು ಇಲ್ಲಿ ಬುಕ್ ಮಾಡಿದರೆ ರೈಲು ಟಿಕೆಟ್ ಆಗಲಿದೆ ಅಗ್ಗ

ಹೊಸದಿಲ್ಲಿ, ಫೆ.1: ಇಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಲ್ಲಿ ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿಯಿದೆ. ಐಆರ್‌ಸಿಟಿಸಿ ಮೂಲಕ ಬುಕ್ ಮಾಡಿದ ಎಲ್ಲಾ ರೈಲು ಟಿಕೆಟ್ ಗಳು ಅಗ್ಗ ಆಗಲಿವೆ. ಈ ವೆಬ್ ಸೈಟ್ ಮೂಲಕ ಬುಕ್ ಮಾಡುವ ಟಿಕೆಟ್ ಗಳ ಮೇಲಿನ ಸೇವಾ ತೆರಿಗೆಯನ್ನುಸಚಿವರು ಹಿಂಪಡೆದಿದ್ದಾರೆ.ನವೆಂಬರ್ 8ರ ನೋಟು ಅಮಾನ್ಯೀಕರಣದ ನಂತರಐಆರ್‌ಸಿಟಿಸಿ ಮೂಲಕ ಬುಕ್ ಮಾಡಲಾದ ಟಿಕೆಟ್ ಗಳ ಮೇಲಿನ ಸೇವಾ ತೆರಿಗೆಯನ್ನು ಡಿಸೆಂಬರ್ 31ರ ತನಕ ಸರಕಾರ ಅದಾಗಲೇ ಹಿಂದಕ್ಕೆ ಪಡೆದಿತ್ತು.
ಸ್ಲೀಪರ್ ಸೀಟುಗಳ ಮೇಲೆ ರೂ 20 ಸೇವಾ ತೆರಿಗೆ ಹಾಗೂ ಎಸಿ ಕ್ಲಾಸ್ ಸೀಟ್ ಮೇಲೆ ರೂ 40 ಸೇವಾ ತೆರಿಗೆಯನ್ನು ಐಆರ್‌ಸಿಟಿಸಿ ಮುಖಾಂತರ ಬುಕ್ ಮಾಡಲಾದ ಟಿಕೆಟ್ ಗಳಮೇಲೆ ಭಾರತೀಯ ರೈಲ್ವೇ ವಿಧಿಸುತ್ತಿತ್ತು.
ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೇ ಬಜೆಟನ್ನೂ ಪ್ರಥಮ ಬಾರಿಈ ವರ್ಷ ಮಂಡಿಸಲಾಗುತ್ತಿದ್ದುಬಜೆಟ್ ನಲ್ಲಿ ರೈಲು ಸುರಕ್ಷತಾ ನಿಧಿಯನ್ನು ಸ್ಥಾಪಿಸುವ ಬಗ್ಗೆಯೂ ಹೇಳಲಾಗಿದೆ. ಇದಕ್ಕಾಗಿ ಐದು ವರ್ಷಗಳ ಅವಧಿಯಲ್ಲಿ ರೂ 1,00,000 ಕೋಟಿ ಒದಗಿಸಲಾಗುವುದು. ಒಟ್ಟು 500 ರೈಲ್ವೇ ನಿಲ್ದಾಣಗಳಿಗೆ ಲಿಫ್ಟ್ ಹಾಗೂ ಎಸ್ಕಲೇಟರ್ ಗಳನ್ನು ಒದಗಿಸಿ ಅಂಗವಿಕಲ ಸ್ನೇಹಿಯನ್ನಾಗಿ ಮಾಡಲಾಗುವುದು ಎಂದೂವಿತ್ತ ಸಚಿವರು ಘೋಷಿಸಿದ್ದಾರೆ.





