ಇ. ಅಹ್ಮದ್ ನಿಧನ ವಿಷಯದಲ್ಲಿ ಕೇಂದ್ರ ಸರಕಾರ ಲಜ್ಜಾಸ್ಪದವಾಗಿ ವರ್ತಿಸಿದೆ: ಮುಸ್ಲಿಂ ಲೀಗ್
.jpg)
ಹೊಸದಿಲ್ಲಿ,ಫೆ.1: ಇ. ಅಹ್ಮದ್‌ರ ನಿಧನಕ್ಕೆ ಸಂಬಂಧಿಸಿ ಕೇಂದ್ರಸರಕಾರ ಮತ್ತು ಆಸ್ಪತ್ರೆ ಜೊತೆಗೂಡಿ ಲಜ್ಜಾಸ್ಪದವಾಗಿ ವರ್ತಿಸಿದೆ ಎಂದು ಮುಸ್ಲಿಂ ಲೀಗ್ ನಾಯಕ ಇ.ಟಿ. ಮುಹಮ್ಮದ್ ಬಶೀರ್ ಆರೋಪಿಸಿದ್ದಾರೆ.
ಕೇಂದ್ರಸರಕಾರ ಪಾರ್ಲಿಮೆಂಟರಿ ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂದು ಸಂಸದ ಎಂ.ಬಿ. ರಾಜೇಶ್ ಪ್ರತಿಕ್ರಿಯಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಟ್ಟ ಅನುಭವಗಳಾಗಿವೆ ಎಂದು ಸಂಸದ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ನಿನ್ನೆ ಆಸ್ಪತ್ರೆಗೆ ಬಂದಿದ್ದ ಇ.ಅಹ್ಮದ್‌ರ ಮಕ್ಕಳನ್ನೇ ಅವರನ್ನು ಭೇಟಿಯಾಗಲು ನಿರಾಕರಿಸಿದ್ದು ವಿವಾದವಾಗಿತ್ತು. ವಿಷಯ ತಿಳಿದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂದಿ, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಝಾದ್, ಅಹ್ಮದ್ ಪಟೇಲ್ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕವೇ ಇ.ಅಹ್ಮದ್‌ರನ್ನು ಭೇಟಿಯಾಗಲು ಅವರ ಮಕ್ಕಳಿಗೆ ಅನುಮತಿ ನೀಡಲಾಯಿತು. ಇದರ ನಂತರ ಇ.ಅಹ್ಮದ್ ನಿಧನವಾದ ಮಾಹಿತಿ ದೃಢೀಕರಣವಾಗಿತ್ತು.
ಒಂದು ಗಂಟೆವರೆಗೂ ಕಾದು ನಿಂತರೂ ತಂದೆಯನ್ನು ಭೇಟಿಯಾಗಲು ಅನುಮತಿ ನೀಡಲಿಲ್ಲ ಎಂದು ಅಹ್ಮದ್‌ರ ಮಕ್ಕಳಾದ ನಸೀರ್ ಅಹ್ಮದ್, ರಯೀಸ್ ಅಹ್ಮದ್, ಡಾ. ಫೌಝಿಯ, ಅಳಿಯ ಡಾ. ಬಾಬು ಶೆರ್‌ಷಾದ್ ಹೇಳಿದ್ದಾರೆ.
ಭೇಟಿ ನಿರಾಕರಿಸಿದ್ದರ ಹಿಂದೆ ನಿಗೂಢತೆಯಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಅಹ್ಮದ್‌ರನ್ನು ವೆಂಟಿಲೇಟರ್ ಹಸ್ತಾಂತರಿಸುವ ಮೊದಲು ತಮ್ಮ ಅನುಮತಿಯನ್ನು ಕೇಳಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆಂದು ವರದಿಯಾಗಿದೆ.





