ಫೆ.2, 3 , 4 ರಂದು ಅಲೋಶಿಯನ್ ಫೆಸ್ಟ್
ಮಂಗಳೂರು , ಫೆ.1 : ಸಂತ ಅಲೋಶಿಯಸ್ ಕಾಲೇಜು ಮಂಗಳೂರು ತನ್ನ 2016-17ನೇ ಸಾಲಿನ ವಾರ್ಷಿಕ ಮಹೋತ್ಸವವನ್ನುಫೆಬ್ರವರಿ 2 ರಿಂದ 4 ರವರೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದೆ.
ವಾರ್ಷಿಕ ಮಹೋತ್ಸವದ ಉದ್ಘಾಟನಾ ಸಮಾರಂಭವು ಫೆಬ್ರವರಿ 2, 2017 ರ ಗುರುವಾರದಂದು ಬೆಳಿಗ್ಗೆ 9 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ. ಫಾ. ಡೈನೀಶಿಯಸ್ ವಾಸ್ ರೆಕ್ಟರ್, ಸಂತ ಅಲೋಶಿಯಸ್ ಕಾಲೇಜು, ಇವರು ವಹಿಸಲಿದ್ದಾರೆ. ಶ್ರೀ ವಾಸ್ತಿ ವೆಂಕಟೇಶ್ ( ಡೆಪ್ಯುಟಿ ಜನರಲ್ ಮ್ಯಾನೇಜರ್ , ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಛೇರಿ, ಬೆಂಗಳೂರು) ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗೌರವಾನ್ವಿತ ಅತಿಥಿಗಳಾಗಿ ಶ್ರೀ ಕಿಶೋರ್ ಆಳ್ವ, ಕಾರ್ಯನಿರ್ವಾಹಕ ನಿರ್ದೇಶಕ, ಅಭಿವೃದ್ಧಿ ಯೋಜನೆ ಮತ್ತು ಕಾರ್ಪೋರೇಟ್ ವ್ಯವಹಾರ ಯು.ಪಿ.ಸಿ.ಎಲ್, ಇವರು ಆಗಮಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಂ.ಫಾ. ಸ್ವೀಬರ್ಟ್ ಡಿ’ಸಿಲ್ವ ಪ್ರಾಂಶುಪಾಲರು ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಡಾ. ಮುಕುಂದ್ ಪ್ರಭು, ಸಂಯೋಜಕರು ಹಾಗೂ ಮಿಷೆಲ್ ಡಿ’ಸೋಜ಼ಾ, ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿರುವರು.
ಸಮಾರೋಪ ಸಮಾರಂಭವು ಶನಿವಾರ ,ಫೆಬ್ರವರಿ 4, 2017 ರಂದು ಸಂಜೆ 3.30 ಕ್ಕೆ ಜರುಗಲಿದೆ. ಈ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಂ. ಫಾ. ಸ್ವೀಬರ್ಟ್ ಡಿ’ಸಿಲ್ವ ಪ್ರಾಂಶುಪಾಲರು ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಹಾಗೂ ಮುಖ್ಯ ಅತಿಥಿಗಳಾಗಿ ಶ್ರಿ .ಬಿ ಚಂದ್ರ ಶೇಖರ್ ರಾವ್, ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್ ಮುಖ್ಯ ಕಛೇರಿ , ಮಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು .
ಈ ವಾರ್ಷಿಕ ಮಹೋತ್ಸವದಲ್ಲಿ ಎಂಟು ವಿಭಾಗಗಳ ಎಂಟು ವಿವಿಧ ಹಬ್ಬಗಳನ್ನು ಹಮ್ಮಿಕೊಳ್ಳಲಾಗಿದೆ. ಅವು ಆರ್ಟ್-ಬೀಟ್ (ಕಲಾ- ವಿಭಾಗ), ಇಂಪ್ರಿಂಟ್ಸ್ (ವಿಜ್ಞಾನ ವಿಭಾಗ), ಅ್ಯಕ್ಮೆ (ವಾಣಿಜ್ಯ ವಿಭಾಗ), ಸ್ಪಿನ್-ಔಟ್(ಬಿ.ಬಿ.ಮ್), ಕಂಪೋಸಿಟ್(ಬಿ.ಸಿ.ಎ. ವಿಭಾಗ), ಅಸ್ತಿತ್ವ (ಸಾಂಸ್ಕೃತಿಕ ಹಬ್ಬ), ಅಲೋಸಿಯಡ್ ಸಿಂಫೋನಿಯ (ಕ್ರೀಡಾ ವಿಭಾಗ), ಸಿಂಫೋನಿಯ (ಬ್ಯಾಟಲ್ ಆಫ್ ಬ್ಯಾಂಡ್) .
ಆರ್ಟ್-ಬೀಟ್:
ಇದೊಂದು ರಾಷ್ಟ್ರಮಟ್ಟದ ಕಲಾವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ, "ನಿಸರ್ಗ" ಎಂಬ ವಿಷಯಾಧಾರಿತ ಉತ್ಸವವಾಗಿದೆ. ಇದರಲ್ಲಿ ರಸಪ್ರಶ್ನೆ, ಚರ್ಚಾಸ್ಪರ್ಧೆ, ಬೆಂಕಿರಹಿತ ಆಹಾರ ತಯಾರಿಕೆ, ಛಾಯಾಗ್ರಹಣ, ಹೀಗೆ ಒಟ್ಟು 15 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಇಂಪ್ರಿಂಟ್ಸ್:
ಇದೊಂದು ರಾಷ್ಟ್ರಮಟ್ಟದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ "ಸ್ವರ ಮೇಳಗಳ ಸಮ್ಮಿತಿ" ಎಂಬ ವಿಷಯಾಧಾರಿತ ಉತ್ಸವವಾಗಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಹೀಗೆ ಒಟ್ಟು 9 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪಿನ್-ಔಟ್:
ಇದೊಂದು ರಾಷ್ಟ್ರಮಟ್ಟದ ವ್ಯವಹಾರ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ "ಸರ್ಜ್ ‘ಎಂಬ ವಿಷಯಾಧಾರಿತ ಉತ್ಸವವಾಗಿದೆ. ಇದರಲ್ಲಿ ಬೆಸ್ಟ್ ಮ್ಯಾನೇಜರ್, ಪಬ್ಲಿಕ್ ರಿಲೇಷನ್, ಕ್ರೈಸಿಸ್ ಮ್ಯಾನೇಜ್ಮೆಂಟ್, ಹೀಗೆ ಒಟ್ಟು 6 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅ್ಯಕ್ಮೆ:
ಇದೊಂದು ರಾಷ್ಟ್ರಮಟ್ಟದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ "ಅನಿರೀಕ್ಷಿತವನ್ನು ನಿರೀಕ್ಷಿಸಿರಿ" ಎಂಬ ವಿಷಯಾಧಾರಿತ ಉತ್ಸವವಾಗಿದೆ. ಇದರಲ್ಲಿ ದ ಫೆನೋಮ್, ದ ಎಕ್ಸ್ ಪ್ಲೋರರ್ಸ್, ಹೀಗೆ ಒಟ್ಟು 7 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಂಪೋಸಿಟ್:
ಇದೊಂದು ರಾಷ್ಟ್ರಮಟ್ಟದ ಕಂಪ್ಯೂಟರ್ ಸೈನ್ಸ್ (ಗಣಕವಿಜ್ಞಾನ) ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ "ಕಾನ್ ಕ್ಲೇವ್’’ ಆಫ್ ಟೆಕ್ನೊಮೇನಿಯ" ಎಂಬ ವಿಷಯಾಧಾರಿತ ಉತ್ಸವವಾಗಿದೆ. ಇದರಲ್ಲಿ ಕೋಡ್ ಐಟಿ, ಇನ್ಮೋಷನ್, ಟೆಕ್ಕಿಪೀಡಿಯ, ಹೀಗೆ ಒಟ್ಟು 10 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಸ್ತಿತ್ವ:
ಇದೊಂದು ರಾಷ್ಟ್ರಮಟ್ಟದ ಸಾಂಸ್ಕೃತಿಕ ಉತ್ಸವವಾಗಿದೆ. ಇದು ಭರತನಾಟ್ಯ, ಜಾನಪದ ನೃತ್ಯ , ಕುಟುಕು ಜಾಹೀರಾತು, ಹೀಗೆ ಒಟ್ಟು 5 ಸ್ಪರ್ಧೆಗಳನ್ನು ಒಳಗೊಂಡಿದೆ.
ಸಿಂಫೋನಿಯ:
ಇದು ಉತ್ಸವದ ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು 4 ಫೆಬ್ರವರಿ, ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಕಾಲೇಜಿನ ಆವರಣದಲ್ಲಿ ಸಂಗೀತಮಯಗೊಳಿಸುವುದು ಇದರ ಉದ್ದೇಶ. ಇದು ’ ಬ್ಯಾಟಲ್ ಆಫ್ ಬ್ಯಾಂಡ್ಸ್’ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ.
ಅಲೋಸಿಯಡ್:
ಇದೊಂದು ರಾಷ್ಟ್ರಮಟ್ಟದ ಕ್ರೀಡಾ ಉತ್ಸವವಾಗಿದೆ. ಈ ಉತ್ಸವದಲ್ಲಿ ಬಾಸ್ಕೆಟ್ ಬಾಲ್, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್-ಬಾಲ್, ಸಾಫ್ಟ್-ಬಾಲ್, ಚೆಸ್ ಮುಂತಾದ ಆಟಗಳು ನಡೆಯಲಿವೆ.
ಸಂತ ಅಲೋಶಿಯಸ್ ಕಾಲೇಜಿನ ಬಗ್ಗೆ
ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ನ್ಯಾಕ್ ಸಂಸ್ಥೆಯ ವತಿಯಿಂದ ಮೂರನೇ ಆವೃತಿಯಲ್ಲಿ ನ್ಯಾಂಕ್ ಮೌಲ್ಯಾಂಕದಲ್ಲಿ ‘ಎ’ ಶ್ರೇಣಿಯೊಂದಿಗೆ 3.62 ಸಿಜಿಪಿ ಯನ್ನು ಪಡೆದಿದೆ. ಕಳೆದ ಆವೃತಿಯಲ್ಲಿ ‘ಎ’ ಶ್ರೇಣಿಯೊಂದಿಗೆ 3.48 ಸಿಜಿಪಿಯನ್ನು ಪಡೆದುಕೊಂಡಿತ್ತು. ನ್ಯಾಕ್ ಸಂಸ್ಥೆಯ ಕಳೆದ ಮಾರ್ಚ್ 2015ರಲ್ಲಿ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಕಟ್ಟಡ ಮತ್ತು ಗುಣಮಟ್ಟ ಹಾಗೂ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು . ಇಂತಹ ಅತ್ಯುನ್ನತ್ತ ಮಾನ್ಯತೆಯೊಂದಿಗೆ ಕರ್ನಾಟಕದ ಮೊದಲ 5 ಕಾಲೇಜುಗಳಲ್ಲಿ ಒಂದಾಗಿದೆ. ಡಿಬಿಟಿ ಭಾರತೀಯ ಸರಕಾರದ ಸ್ಟಾರ್ ಸ್ಟೇಟಸ್ ಮಾನ್ಯತೆ ಪಡೆದ ಕಾಲೇಜೆಂಬ ಹೆಗ್ಗಳಿಕೆಯನ್ನು ಸಂತ ಅಲೋಸಿಯಸ್ ಕಾಲೇಜು ಪಡೆದುಕೊಂಡಿದೆ.
135 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಕಾಲೇಜು ಸ್ವಾಯತ್ತತೆಯನ್ನು ಪಡೆದು ಹಲವಾರು ಸಾಧನೆಗಳನ್ನು ಮಾಡಿದ್ದು ಅದರಲ್ಲಿ ಯುಜಿಸಿ ವತಿಯಿಂದ ಅತ್ಯುನ್ನತ ಸಾಮರ್ಥ್ಯವುಳ್ಳ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯಿಂದ ಉನ್ನತ ಪದವಿ ಹಾಗೂ ಸಂಶೋದನೆ ಅಧ್ಯಯನಗಳಲ್ಲಿ ಸುಮಾರು 14000 ವಿದ್ಯಾರ್ಥಿಗಳು ತಮ್ಮ ವಿಧ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.
ಸದ್ಯದ ಮಾನ್ಯತೆಯ ಪ್ರಕಾರ ಈ ಕಾಲೇಜು ಭಾರತದಲ್ಲಿರುವ 45000 ಕಾಲೇಜುಗಳಲ್ಲಿ ಮೊದಲ ಮೂರು ಕಾಲೇಜುಗಳಲ್ಲಿ ಒಂದಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಜಯಲಕ್ಷ್ಮಿ ಆಳ್ವ ಉಪನ್ಯಾಸಕಿ, ಪತ್ರಿಕೋಧ್ಯಮ ವಿಭಾಗ .9743649978
ಆರ್ಟ್-ಬೀಟ್: ಶ್ರೀಮತಿ.ಸೆವರಿನ್ ಪಿಂಟೊ 91-9739865740
ಇಂಪ್ರಿಂಟ್ಸ್: ಶ್ರೀ ಸಂತೋಷ್ ಗೋವಿಯಾಸ್. 919448724682
ಸ್ಪಿನ್-ಔಟ್: ಕು, ಸುರಕ್ಷ ಕರ್ಕೆರಾ .919845243266
ಅ್ಯಕ್ಮೆ: ಶ್ರೀ ದತ್ತ ಕುಮಾರ್ 9844671627
ಕಂಪೋಸಿಟ್: ಕು .ಸಂಗೀತ ಎನ್. 9743292286
ಅಸ್ತಿತ್ವ: ಕು. ಸ್ಮಿತ. ಡಿ.ಕೆ 9844453832
ಸಿಂಫೋನಿಯ: ಕು. ಮಿಶಲ್ ಡಿಸೋಜ 8884864154
ಅಲೋಸಿಯಡ್: ಶ್ರೀ ಡೋನೆಟ್ ಡಿ’ಸೋಜ ,9449264256







