ಹೋಂಡಾ 41,580 ವಾಹನಗಳನ್ನು ಹಿಂಪಡೆಯುತ್ತಿದೆ: ಕಾರಣ ಇಲ್ಲಿದೆ

ಹೊಸದಿಲ್ಲಿ,ಫೆ.1: ತಾಂತ್ರಿಕ ತೊಂದರೆಯ ಹಿನ್ನೆಲೆಯಲಿ ಹೋಂಡಾ ಕಾರ್ಸ್ ಇಂಡಿಯ 41,580 ವಾಹನಗಳನ್ನು ಹಿಂಪಡೆಯುತ್ತಿದೆ. 2012ರಲ್ಲಿ ನಿರ್ಮಿಸಿದ ಜಾಸ್, ಸಿಟಿ, ಸಿವಿಕ್ ಅಕಾರ್ಡ್ ಮಾದರಿಯ ಹೋಂಡಾ ಕಾರುಗಳನ್ನು ಕಂಪೆನಿ ವಾಪಸು ಪಡೆಯುತ್ತಿದೆ.
ಹೋಂಡಾ ಸಿಟಿಯ ಹೆಚ್ಚಿನ ಕಾರುಗಳನ್ನು ವಾಪಸು ಪಡೆಯಲಾಗುತ್ತಿದೆ. ಸಿಟಿಯ 32,456 ಯುನಿಟ್‌ಗಳನ್ನು ಮರಳಿ ಪಡೆಯುತ್ತಿದೆ. 7265 ಜಾಸ್, 1200 ಸಿವಿಕ್, 659 ಅಕಾರ್ಡ್ ಕಾರುಗಳನ್ನು ಕಂಪೆನಿ ಹಿಂಪಡೆಯುತ್ತಿದೆ. ಜಾಪಾನೀಸ್ ಕಂಪೆನಿಯ ಟಕಟಾ ಏರ್‌ಬ್ಯಾಗ್‌ಗಳಲ್ಲಿ ತೊಂದರೆ ಕಂಡು ಬಂದದ್ದರಿಂದ ಹೋಂಡಾ ಕಾರುಗಳನ್ನು ವಾಪಸು ಪಡೆಯುತ್ತಿದೆ ಆದರೆ ಟಕಟಾ ಏರ್‌ಬ್ಯಾಗ್ ಹೊಂದಿರುವ ವಿವಿಧ ಕಂಪೆನಿಗಳ 70ಲಕ್ಷಕ್ಕೂ ಹೆಚ್ಚುವಾಹನಗಳಿಗೆ ಅಡಚಣೆ ಸಂಭವಿಸಿದೆ ಎನ್ನಲಾಗುತ್ತಿದೆ ಎಂದು ವರದಿ ತಿಳಿಸಿದೆ.
Next Story





