ಧೋನಿ ಚೊಚ್ಚಲ ಅರ್ಧಶತಕ; ಭಾರತ 202/6
ಅಂತಿಮ ಟ್ವೆಂಟಿ-20 ಪಂದ್ಯ

ಬೆಂಗಳೂರು, ಫೆ.1: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಮೂರನೆ ಹಾಗೂ ಅಂತಿಮ ಟ್ವೆಂಟಿ-20ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ದಾಖಲಿಸಿದ ಚೊಚ್ಚಲ ಅರ್ಧಶತಕ ನೆರವಿನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿದೆ.
ಸುರೇಶ್ ರೈನಾ 63 ರನ್(45ಎ, 2ಬೌ,5ಸಿ), ಧೋನಿ 56 ರನ್(36ಎ, 5ಬೌ,2ಸಿ) , ರಾಹುಲ್ 22 ರನ್, ಯುವರಾಜ್ 27 ರನ್, ಪಂತ್ ಔಟಾಗದೆ 6ರನ್, ಪಾಂಡ್ಯ 11 ರನ್ ಗಳಿಸಿ ಇಂಗ್ಲೆಂಡ್ ಗೆ ಕಠಿಣ ಸವಾಲು ವಿಧಿಸಲು ನೆರವಾದರು.
Next Story





