ದೇಶದ ಶೇಕಡ 60 ಭಾಗದ ಮೇಲೂ ಅಫ್ಘಾನ್ ಸರಕಾರಕ್ಕೆ ನಿಯಂತ್ರಣ ಇಲ್ಲ

ಕಾಬೂಲ್: ಕಳೆದ ವರ್ಷ ಪ್ರಬಲ ನೆಲೆಗಳಿಂದ ಅಫ್ಘಾನ್ ಸೇನೆ ಹಿಮ್ಮೆಟ್ಟಿದ ಬಳಿಕ ಅಘ್ಘಾನಿಸ್ತಾನ ಸರಕಾಕ್ಕೆ ದೇಶದ ಶೇಕಡ 60ರಷ್ಟು ಭಾಗದ ಮೇಲೂ ನಿಯಂತ್ರಣ ಇಲ್ಲ ಎಂದು ಅಮೆರಿಕದ ವಿಚಕ್ಷಣಾ ಸಂಸ್ಥೆ ಬುಧವಾರ ಬಹಿರಂಗಪಡಿಸಿದೆ.
ಅಫ್ಘಾನಿಸ್ತಾನ ಸೈನಿಕರು ಮತ್ತು ಪೊಲೀಸರು ಸಾವಿರಾರು ಮಂದಿ ಮಿಲಿಟರಿ ಸಲಹಾಗಾರರ ನೆರವಿನೊಂದಿಗೆ ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ನೇತೃತ್ವದ ಅತಿಕ್ರಮಣವನ್ನು ತಡೆಯಲು ಹರಸಾಹಸ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ 407 ಜಿಲ್ಲೆಗಳ ಪೈಕಿ ಸದ್ಯಕ್ಕೆ ಸರಕಾರ ಶೇಕಡ 57ರಷ್ಟು ಜಿಲ್ಲೆಗಳ ಮೇಲೆ ಮಾತ್ರ ನಿಯಂತ್ರಣ ಹೊಂದಿದೆ ಎಂದು ಅಮೆರಿಕದ ವಿಶೇಷ ಇನ್‌ಸ್ಪೆಕ್ಟರ್ ಜನಲರ್ ಫಾರ್ ಅಫ್ಘಾನಿಸ್ತಾನ್ ರಿಕನ್‌ಸ್ಟ್ರಕ್ಷನ್ ಸಂಘಟನೆಯ ಮುಖ್ಯಸ್ಥ ಬಿಡುಗಡೆ ಮಾಡಿದ ಸೇನಾ ಅಂದಾಜಿನಲ್ಲಿ ವಿವರಿಸಲಾಗಿದೆ. ಅಂದರೆ 2015ರಲ್ಲಿ ಅಫ್ಘಾನ್ ಸೇನೆಯ ನಿಯಂತ್ರಣದಲ್ಲಿದ್ದ ಪ್ರದೇಶಕ್ಕಿಂತ ಶೇಕಡ 15ರಷ್ಟು ಪ್ರದೇಶ ಕಡಿಮೆಯಾಗಿದೆ ಎಂದು ವರದಿ ವಿವರಿಸಿದೆ.
"ಅಮೆರಿಕದ ಸೇನೆ ನೀಡಿದ ಅಂಕಿ ಅಂಶಗಳನ್ನು ಆಧರಿಸಿದ ಎಸ್‌ಐಜಿಎಆರ್ ವಿಶ್ಲೇಷಣೆಯು, ಈ ತ್ರೈಮಾಸಿಕದಲ್ಲಿ ಅಮೆರಿಕದ ಭದ್ರತಾ ಸ್ಥಿತಿ ಸುಧಾರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಫ್ಘಾನಿಸ್ತಾನ ಭದ್ರತಾ ಪಡೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜತೆಗೆ ಸಾವುನೋವಿನ ಸಂಖ್ಯೆ ಹಾಗೂ ಅತಿಕ್ರಮಣಕಾರರ ಹಿಡಿತದಲ್ಲಿರುವ ಜಿಲ್ಲೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಶೇಕಡ 60ರಷ್ಟು ಜಿಲ್ಲೆಗಳು ಅತಿಕ್ರಮಣಕಾರರ ಹಿಡಿತದಲ್ಲಿದ್ದು, ಶೇಕಡ 33ರಷ್ಟು ಪ್ರದೇಶದಲ್ಲಿ ಹಕ್ಕುಸ್ಥಾಪನೆಯ ಪ್ರಯತ್ನಗಳು ಉಭಯ ಬಣಗಳಿಂದ ನಡೆದಿವೆ ಎಂದು ವರದಿ ವಿವರಿಸಿದೆ.







