ಫಾರ್ಮಾ ಮಾಲಕನಿಗೆ 16 ಲಕ್ಷ ರೂ. ಮೋಸ: ಏಜೆಂಟ್ ಪರಾರಿ
ಮಂಗಳೂರು, ಫೆ.1: ಬಂದರಿನಲ್ಲಿರುವ ಮೆಡಿಸಿನ್ ಫಾರ್ಮಾವೊಂದರಲ್ಲಿ ಕಲೆಕ್ಷನ್ ಏಜೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಸಂಸ್ಥೆಗೆ 16 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋಸ ಮಾಡಿ ಪರಾರಿಯಾಗಿರುವ ಆರೋಪಿಯನ್ನು ಮಣಿಪಾಲದ ಶಿವ ಪ್ರಸಾದ್ (38) ಎಂದು ಗುರುತಿಸಲಾಗಿದೆ.
ಈತ ಆಲ್ವಿನ್ ಎಂಬವರಿಗೆ ಸೇರಿದ ಮೆಡಿಸಿನ್ ಪೂರೈಕೆ ಮಾಡುವ ಸಂಸ್ಥೆಯಲ್ಲಿ ಕಲೆಕ್ಷನ್ ಏಜೆಂಟ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಸಂಗ್ರಹಿಸಲಾದ 16 ಲಕ್ಷ ರೂ.ನಷ್ಟು ಹಣವನ್ನು ಸಂಸ್ಥೆಗೆ ಹಸ್ತಾಂತರಿಸದೆ, ಕೊಂಡೊಯ್ದಿದ್ದಾನೆಂದು ಆರೋಪಿಸಲಾಗಿದೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





