ಕಳವು: ಓರ್ವನ ಬಂಧನ
ಬೆಳ್ತಂಗಡಿ, ಫೆ.1: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಂತಿದ್ದ ಬೆಂಗಳೂರು ಆನೆಕಲ್ ನಿವಾಸಿ ಲೋಕೇಶ್ ಎಂಬವರ ಕಿಸೆಯಿಂದ ಎಟಿಎಂ ಕಾರ್ಡ್ ಹಾಗೂ 8,700 ರೂ. ನಗದು ಕಳವುಗೈದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಕಳವಿನ ಮಾಹಿತಿ ಪಡೆದಿದ್ದು ಇದರಂತೆ ಎಸ್ಸೆ ರವಿ ಮತ್ತು ತಂಡ ಕಾರ್ಯಚರಣೆ ನಡೆಸಿ ಎಟಿಎಂ ಕಾರ್ಡನ್ನು ಉಪಯೋಗಿಸಿ ಮಂಗಳೂರಿನ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀಸಿದ ಬಗ್ಗೆ ಮಾಹಿತಿ ಕಲೆ ಹಾಕಿ ಅಲ್ಲಿನ ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶಿಲಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಆರೋಪಿ ಚಿತ್ತೂರು ಜಿಲ್ಲೆ ಪೂಣೆಪಲ್ಲಿ ರೇಣುಕಾನಗರ ನಿವಾಸಿ ಶ್ರೀನಿವಾಸುಲು ಎಂದು ಗುರುತಿಸಲಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕಳವು ಮಾಡಿದ ಕಾರ್ಡ್ ಹಾಗೂ ಖರೀದಿ ಮಾಡಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





