ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬೆಳ್ತಂಗಡಿ, ಫೆ.1: ಕಳವು ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ 13ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಚಿಕ್ಕಮಗಳೂರು ತರಿಕೆರೆ ನಿವಾಸಿ ನೂರ್‌ಅಹ್ಮದ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಸಿದ್ದಾರೆ. ಈತನ ವಿರುದ್ಧ ಬೆಳ್ತಂಗಡಿ ಎಸ್ಸೆ ರವಿ ಬಿ.ಎಸ್. ಮಾಹಿತಿ ಕಲೆಹಾಕಿದ್ದು ಅದರಂತೆ ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯಲ್ಲಿ ಪತ್ತೆಮಾಡಿ ಬಂಸಿದ್ದಾರೆ.
ಆರೋಪಿಯ ವಿರುದ್ಧ 2002ನೆ ಇಸವಿಯಲ್ಲಿ ಬೆಳ್ತಂಗಡಿ ಸಿಜೆ ಮತ್ತು ಜೆಎಂಎ್ಸಿ ನ್ಯಾಯಾಲಯದ ಮುದ್ದೇಮಾಲ್ ಕೊಠಡಿ ಪ್ರವೇಶಿಸಿ ಗಂಧದ ಕೊರಡುಗಳನ್ನು ಕಳವು ಮಾಡಿದ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಶಿರಸ್ತೇದಾರ ನಾರಾಯಣ ಪೂಜಾರಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ಆರೋಪಿಗಳನ್ನು ಬಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರ ವಿರುದ್ಧ ದೋಷಾರೋಣ ಪಟ್ಟಿ ಸಲ್ಲಿಸಲಾಗಿದ್ದು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ನೂರ್ ಅಹ್ಮದ್ ತಲೆ ಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.





