ಅಕ್ರಮ ಮರಳು ಸಾಗಾಟ: ಮೂರು ಲಾರಿಗಳು ವಶಕ್ಕೆ
ಮಂಗಳೂರು, ಫೆ.1: ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಭೂಗರ್ಭ ಇಲಾಖಾ ಅಕಾರಿಗಳು ಮಂಗಳವಾರ ವಿವಿಧೆಡೆ ದಾಳಿ ನಡೆಸಿಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಸಿದ್ದಾರೆ.
ಅಡ್ಯಾರ್ ಬಳಿ ಮರಳು ತುಂಬಿಸಿಕೊಂಡು ಉಡುಪಿಯತ್ತ ಸಾಗುತ್ತಿದ್ದ ಲಾರಿಯೊಂದನ್ನು ಬಿಕರ್ನಕಟ್ಟೆಯ ಬಳಿ ಗ್ರಾಮಾಂತರ ಠಾಣಾ ಪಿಎಸ್ಸೆ ವೆಂಕಟೇಶ್ ಹಾಗೂ ಸಿಬ್ಬಂದಿ ವಶಪಡಿಸಿಕೊಂಡು ಲಾರಿ ಚಾಲಕ ಉಪ್ಪಿನಂಗಡಿಯ ರಝಾಕ್(35) ಎಂಬಾತನನ್ನು ಬಂಸಿದ್ದಾರೆ. ಪೊಲೀಸರು 10.5 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನೀರುಮಾರ್ಗದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಗ್ರಾಮಾಂ ತರ ಪೊಲೀಸ್ ಠಾಣಾ ಪಿಎಸ್ಸೆ ಹರೀಶ್ ದಾಳಿ ನಡೆಸಿದ್ದು, ಈ ಸಂದರ್ಭ ಆರೋಪಿ ಲಾರಿ ಚಾಲಕಕಿರಣ್ ಪರಾರಿಯಾಗಿದ್ದಾನೆ. ಲಾರಿ ಸೇರಿ 20ಲಕ್ಷಕ್ಕೂ ಅಕ ವೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಭೂಗರ್ಭ ಇಲಾಖಾ ಅಕಾರಿ ಹರೀಶ್ ಮೋಹನ್ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿ, ಚಾಲಕ ಉಪ್ಪಿನಂಗಡಿಯ ಶಿವಾನಂದ(34) ಎಂಬಾತನನ್ನು ಬಂಸಿದ್ದಾರೆ. ಆರೋಪಿಯನ್ನು ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಅಕ್ರಮ ಮರಳು ಸಾಗಾಟದಲ್ಲಿ ಬಂತರಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಸಲಾಗಿದೆ.







