ನೇತ್ರಾ ಪರೀಕ್ಷಾ ಶಿಬಿರ
ಮಂಗಳೂರು, ಫೆ.2: ಜಿಲ್ಲಾ ಸಂಚಾರಿ ನೇತ್ರ ಘಟಕ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಇವುಗಳ ಆಶ್ರಯದಲ್ಲಿ ಫೆ. 2017ರ ನೇತ್ರಾ ಪರೀಕ್ಷಾ ಶಿಬಿರವು ಫೆ. 3 ಮತ್ತು 5ರಂದು ಕನಕ ಮಜಲು ಜಿಲ್ಲಾ ಪಂಚಾಯತ್ ಶಾಲೆ ಸುಳ್ಯ, ಫೆ.5 ಮತ್ತು 7ರಂದು ಜಪ್ಪಿನಮೊಗರು, ಫೆ.7 ಮತ್ತು 9ರಂದು ಕಂಕನಾಡಿ, ಫೆ.10 ಮತ್ತು 12ರಂದು ಫಳ್ನೀರ್, ಫೆ.14 ಮತ್ತು 16ರಂದು ಗ್ರಾಪಂ ಕಚೇರಿ ಬೆಳ್ತಂಗಡಿ, ಫೆ.17 ಮತ್ತು 19ರಂದು ಪ್ರಾಥಮಿಕ ಆರೋಗ್ಯಕೇಂದ್ರ, ಪೂಂಜಾಲಕಟ್ಟೆ, ಫೆ.19 ಮತ್ತು 21ರಂದು ಬಜಾಲ್, ಫೆ. 21 ಮತ್ತು 23ರಂದು ಸತ್ಯಸಾಯಿ ಮಂದಿರ, ಪುತ್ತೂರು, ಫೆ.28 ಹಾಗೂ ಮಾರ್ಚ್ 2ರಂದು ವೆಲೆನ್ಸಿಯಾ ಇಲ್ಲಿ ನಡೆಯಲಿದೆ ಎಂದು ವೆನ್‌ಲಾಕ್ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





