Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬೆಂಕಿ ಹಚ್ಚುವ ಸಂಚು ವಿಫಲ

ಬೆಂಕಿ ಹಚ್ಚುವ ಸಂಚು ವಿಫಲ

ವಾರ್ತಾಭಾರತಿವಾರ್ತಾಭಾರತಿ3 Feb 2017 12:11 AM IST
share

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಕ್ಕೆ ನಮಗೆ ಗೊತ್ತಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಉಳ್ಳಾಲದಲ್ಲಿ ಘೋಷಿಸಿದ ಕೆಲವೇ ದಿನಗಳಲ್ಲಿ, ಅದಕ್ಕೆ ಪೂರಕವಾದ ಭೀಕರ ಕೃತ್ಯವೊಂದನ್ನು ಉಳ್ಳಾಲ ಸಮೀಪದ ಹಿಂಜಾವೇ ಕಾರ್ಯಕರ್ತನೊಬ್ಬ ಅವಿಭಜಿತ ಜಿಲ್ಲೆಗೆ ಸೇರುವ, ಆದಿ ಉಡುಪಿ ಸಮೀಪ ಎಸಗಿದ್ದಾನೆ. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿರುವ ಆದಿ ಉಡುಪಿ ಈ ಹಿಂದೆ, ಇಬ್ಬರು ಅಮಾಯಕ ಗೋವ್ಯಾಪಾರಿಗಳನ್ನು ಬೆತ್ತಲೆಗೊಳಿಸುವ ಮೂಲಕ ಇಡೀ ದೇಶದ ಮುಂದೆ ಬೆತ್ತಲಾಗಿತ್ತು. ಇದೀಗ ಕಳೆದ ಜನವರಿ 28ರಂದು ಈ ಊರು ಮತ್ತೆ ಸುದ್ದಿಯಾಯಿತು. ಇಲ್ಲಿನ ಮಸೀದಿಯೊಂದಕ್ಕೆ ಅಚಾನಕ್ಕಾಗಿ ನುಗ್ಗಿದ ಯುವಕನೊಬ್ಬ ಕಲ್ಲು ತೂರಿ ಬಳಿಕ ಪರಾರಿಯಾಗಿದ್ದಾನೆ. ಅದೇ ದಿನ ರಾತ್ರಿ ಇನ್ನೊಂದು ಬರ್ಬರ ಘಟನೆಯೂ ನಡೆಯಿತು. ಅಲ್ಲಿಗೆ ಸಮೀಪವಿರುವ ಕೊಡಂಕೂರಿನಲ್ಲಿ, ರಿಕ್ಷಾ ಚಲಾಯಿಸುತ್ತಾ ಹೋಗುತ್ತಿದ್ದ ಮುಸ್ಲಿಮ್ ಯುವಕನೊಬ್ಬನನ್ನು ಬರ್ಬರವಾಗಿ ಇರಿದು ಕೊಂದು ಹಾಕಲಾಗಿತ್ತು. ಅಷ್ಟೇ ಅಲ್ಲ ತಡೆಯಲು ಬಂದ ಇನ್ನೋರ್ವನನ್ನೂ ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಅದೃಷ್ಟವಶಾತ್ ಮಸೀದಿಯಲ್ಲಿ ಸಿಸಿ ಕ್ಯಾಮರಾವೊಂದಿತ್ತು. ಅದು ಯುವಕ ಕಲ್ಲು ತೂರಾಟ ಮಾಡುತ್ತಿರುವುದನ್ನು ಇದು ಸೆರೆಹಿಡಿದಿತ್ತು. ಅದರ ಆಧಾರದಲ್ಲಿ ಓರ್ವ ಯುವಕನನ್ನು ಬಂಧಿಸಲಾಯಿತು. ನೋಡಿದರೆ ಆತ ಉಳ್ಳಾಲ ಸಮೀಪದ ಕುಂಪಲ ನಿವಾಸಿ. ಹಿಂದೂಜಾಗರಣಾ ವೇದಿಕೆಯ ಸಕ್ರಿಯ ಕಾರ್ಯಕರ್ತ. ಹೆಸರು ಅಂಕಿತ್ ಪೂಜಾರಿ. ಈತ ಆದಿ ಉಡುಪಿಯಲ್ಲಿರುವ ತನ್ನ ಭಾವನ ಇಂಟೀರಿಯರ್ ಡಿಸೈನ್ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಅತ್ಯಂತ ಹೃದಯವಿದ್ರಾವಕ ವಿಷಯವೆಂದರೆ, ಅಂದು ರಾತ್ರಿ ಅಮಾಯಕನೊಬ್ಬನನ್ನು ಇರಿದು ಕೊಂದಿರುವುದೂ ಈತನೇ ಆಗಿದ್ದ. ಅಮಾಯಕ ಹನೀಫ್‌ನನ್ನು ಕೊಂದು ಹಾಕುವುದಕ್ಕೆ ಈತನಲ್ಲಿ ಯಾವ ಕಾರಣವೂ ಇದ್ದಿರಲಿಲ್ಲ. ರಿಕ್ಷಾ ಚಾಲಕ ಮುಸ್ಲಿಮನೆನ್ನುವುದೇ ಆಕ್ರೋಶಕ್ಕೆ ಕಾರಣ. ಎರಡೂ ಪ್ರಕರಣಗಳಲ್ಲಿ ಅಂಕಿತ್ ಪೂಜಾರಿ ಶಾಮೀಲಾಗಿರುವುದು ಇದೀಗ ಸಾಬೀತಾಗಿರುವುದರಿಂದ ಯುವಕನನ್ನು ಬಂಧಿಸಲಾಗಿದೆ.

ಇಷ್ಟಕ್ಕೂ ಮಸೀದಿಗೆ ಕಲ್ಲು ತೂರುವುದಕ್ಕೆ ಇವನಿಗಿದ್ದ ಅನಿವಾರ್ಯತೆಯಾದರೂ ಏನು? ಒಂದೋ ವೈಯಕ್ತಿಕವಾಗಿ ಮಸೀದಿಯ ಜನರು ಅಥವಾ ಅದಕ್ಕೆ ಸಂಬಂಧಪಟ್ಟವರು ಈತನಿಗೆ ಏನಾದರೂ ತೊಂದರೆಯನ್ನುಂಟು ಮಾಡಿರಬೇಕು. ಅಂತಹ ಯಾವ ಕಾರಣವೂ ಇಲ್ಲ ಎಂದರೆ ಅದರ ಉದ್ದೇಶ, ಇಡೀ ಊರಿಗೆ ಬೆಂಕಿ ಹಚ್ಚುವುದೇ ಆಗಿದೆ. ಅಂದರೆ ಕೋಮುಪ್ರಚೋದನೆಯ ಮೂಲಕ ಜನರನ್ನು ಕೆರಳಿಸಿ ಪರಸ್ಪರ ಗಲಭೆಗೆ ಹಚ್ಚುವುದು. ಅದರಿಂದ ಈತನಿಗೆ ಏನು ಪ್ರಯೋಜನ ಎಂಬ ಪ್ರಶ್ನೆ ಮತ್ತೆ ಹುಟ್ಟುತ್ತದೆ. ಕೇವಲ ಮತಾಂಧತೆಯಿಂದ, ಮುಸ್ಲಿಮರ ಮೇಲಿನ ದ್ವೇಷದಿಂದ ಈತ ಕಾರ್ಯ ಎಸಗಿರುವುದಕ್ಕಿಂತ, ರಾಜಕೀಯ ಮುಖಂಡರು ಈತನಿಗೆ ಹಣವನ್ನು ನೀಡಿ ಈ ಕೆಲಸವನ್ನು ಮಾಡಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಒಟ್ಟಿನಲ್ಲಿ, ಇದು ವೈಯಕ್ತಿಕ ಕಾರಣಕ್ಕಾಗಿ ನಡೆದ ದಾಳಿ ಅಥವಾ ಕೊಲೆಯಂತೂ ಅಲ್ಲವೇ ಅಲ್ಲ. ಆದುದರಿಂದ ಬರೇ ಯುವಕನೊಬ್ಬನನ್ನೇ ಆರೋಪಿಯನ್ನಾಗಿ ಇಡೀ ಪ್ರಕರಣವನ್ನು ಮುಚ್ಚುವ ಬದಲು, ಆತನನ್ನು ಇದಕ್ಕೆ ಪ್ರೇರೇಪಿಸಿದ ಮಂದಿಯ ಕುರಿತಂತೆಯೂ ತನಿಖೆ ನಡೆಯಬೇಕಾಗಿದೆ. ಆ ಮೂಲಕ, ಕೆಲವು ಬೇಜವಾಬ್ದಾರಿ ಕ್ರಿಮಿನಲ್ ಹಿನ್ನೆಲೆಯಿರುವ ತರುಣರನ್ನು ಬಳಸಿಕೊಂಡು ಉಡುಪಿ, ಮಂಗಳೂರಿಗೆ ಬೆಂಕಿ ಹಚ್ಚಲು ಹೊರಟವರ ಸಂಚನ್ನು ವಿಫಲಗೊಳಿಸಬೇಕಾಗಿದೆ.

ಇಂತಹದೇ ದುರಂತ ವರ್ಷಗಳ ಎರಡು ಹಿಂದೆ ನಡೆಯಿತು. ಭುವಿತ್ ಶೆಟ್ಟಿ ಎಂಬ ಸಂಘಪರಿವಾರದ ಹಿನ್ನೆಲೆಯಿರುವ ತರುಣನೊಬ್ಬ ನಡು ರಾತ್ರಿ ಸಾಗುತ್ತಿದ್ದ ಒಬ್ಬ ಅಮಾಯಕ ಯುವಕನನ್ನು ಮುಸ್ಲಿಮನೆಂದು ಭಾವಿಸಿ ಕೊಂದು ಹಾಕಿದ. ಆದರೆ ಮೃತಪಟ್ಟವನು ಮುಸ್ಲಿಮನಾಗಿರಲಿಲ್ಲ. ಆತನ ಹೆಸರು ಹರೀಶ್ ಪೂಜಾರಿ ಎಂದಾಗಿತ್ತು. ಪೊಲೀಸರು ತಕ್ಷಣ ಆರೋಪಿಯನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾದುದರಿಂದ ಮಂಗಳೂರಿಗೆ ಬೆಂಕಿ ಬೀಳುವುದು ತಪ್ಪಿತು. ಕೊಲೆಮಾಡಿದ ಭುವಿತ್ ಶೆಟ್ಟಿ 25 ವರ್ಷದ ಒಳಗಿನವನು. ಬಾಳಿ ಬದುಕಬೇಕಾದವನು. ಕೊಲೆಯಾದ ಹರೀಶ್ ಪೂಜಾರಿಯೂ ಯುವಕ. ಒಬ್ಬ ಕೊಲೆಗಾರನ ಪಟ್ಟ ಹೊತ್ತು ಜೈಲು ಸೇರಿದರೆ, ಇನ್ನೊಬ್ಬ ಯಾವ ಕಾರಣವೂ ಇಲ್ಲದೆ ಕೊಲೆಗೀಡಾದ. ಆದರೆ ಈ ಮಧ್ಯೆ, ಮಂಗಳೂರಿಗೆ ಬೆಂಕಿ ಹಚ್ಚಲು ಸಂಚು ರೂಪಿಸಿ, ಭುವಿತ್ ಶೆಟ್ಟಿಯನ್ನು ತಯಾರುಗೊಳಿಸಿದ ನಾಯಕರು ಮಾತ್ರ ಇಂದಿಗೂ ಜಿಲ್ಲೆಯಲ್ಲಿ ನಾಯಕರಾಗಿ ಮೆರೆಯುತ್ತಿದ್ದಾರೆ. ಭುವಿತ್ ಶೆಟ್ಟಿಯನ್ನು ಕೊಲೆಗಾರನಾಗಿ ಯಾರು ರೂಪಿಸಿದರು? ಆತನ ತಲೆಯಲ್ಲಿ ಕೋಮು ವಿಷವನ್ನು ತುಂಬಿದ ಸಂಘಪರಿವಾರವಷ್ಟೇ ದುರಂತಕ್ಕೆ ಹೊಣೆಯೆ? ಅಥವಾ ಕಲಬುರ್ಗಿ ಕೊಲೆಯನ್ನು ಸಮರ್ಥಿಸಿ ಹೇಳಿಕೆ ನೀಡಿ ಜೈಲಿಗೆ ಹೋಗಿದ್ದ ಭುವಿತ್‌ಗೆ ಅಂದೇ ಜಾಮೀನು ನೀಡಿದ ನ್ಯಾಯಾಲಯದ ಪಾತ್ರವೂ ಇದರ ಹಿಂದೆ ಇಲ್ಲವೆ? ಜೊತೆಗೆ ಸಂಘಪರಿವಾರದ ಜೊತೆಗೆ ಪರೋಕ್ಷವಾಗಿ ಕೈ ಜೋಡಿಸಿಕೊಂಡು, ಅವರ ಕೆಲಸ ಕಾರ್ಯಗಳಿಗೆ ಸಹಕರಿಸುತ್ತಿರುವ ಕೆಲವು ಕಾನೂನು ರಕ್ಷಕರ ಪಾತ್ರವೂ ಇಲ್ಲ ಎನ್ನಲಾಗುತ್ತದೆಯೆ? ಓರ್ವ ಭುವಿತ್ ಶೆಟ್ಟಿಯನ್ನು ಜೈಲಿಗೆ ತಳ್ಳಿದರೆ ಇನ್ನೂ ನೂರಾರು ಭುವಿತ್ ಶೆಟ್ಟಿಗಳನ್ನು ತಯಾರಿಸಲು ಶಕ್ತಿಯಿರುವ ಸಂಘಟನೆಗಳು, ನಾಯಕರು ಹೊರಗಡೆ ಓಡಾಡುತ್ತಿದ್ದಾರೆ. ಕೊಲೆ ಮಾಡಿದ ಚೂರಿಯನ್ನು ಜೈಲಿಗೆ ತಳ್ಳಿ, ಅದನ್ನು ಬಳಸಿದ ಕೈಗಳನ್ನು ಪೋಷಿಸುವ ವ್ಯವಸ್ಥೆ ಇರುವವರೆಗೆ ಹರೀಶ್ ಪೂಜಾರಿ, ಹನೀಫ್‌ರಂತಹ ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ. ಆದಿ ಉಡುಪಿಯಲ್ಲಿ ಸಂಭವಿಸಿದ್ದೂ ಇದಕ್ಕಿಂತ ಭಿನ್ನವಲ್ಲ. ಇಲ್ಲಿ ಅಂಕಿತ್ ಪೂಜಾರಿ ಎಂಬ ಬಿಲ್ಲವ ಸಮುದಾಯದವನಲ್ಲಿ ಕೋಮು ವಿಷವನ್ನು ತುಂಬಿರುವ ಮೇಲ್ವರ್ಗದ ಮಂದಿ, ರಾಜಕೀಯವಾಗಿ ಅತ್ಯುತ್ತಮ ಸ್ಥಾನಗಳನ್ನು ಪಡೆದು ಸಮಾಜದಲ್ಲಿ ಮೆರೆಯುತ್ತಿದ್ದಾರೆ. ಇವರ ಮಾತುಗಳಿಗೆ ಬಲಿಯಾಗಿ, ವೈಯಕ್ತಿಕವಾಗಿ ತನಗೆ ಯಾವ ರೀತಿಯಲ್ಲೂ ಅನ್ಯಾಯ ಮಾಡದ, ಪರಿಚಯವೇ ಇಲ್ಲದ ಅಮಾಯಕನೊಬ್ಬನನ್ನು ಕೊಂದು ಅಂಕಿತ್ ಪೂಜಾರಿ ರೌಡಿ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾನೆ. ಜೀವನ ಪೂರ್ತಿ ಆ ಕಳಂಕವ್ನು ಹೊತ್ತು ಈತ ಬದುಕಬೇಕಾಗಿದೆ.

ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳಿಗೆ ಬಳಸಲ್ಪಡುವ ತರುಣರೆಲ್ಲ ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ಭುವಿತ್ ಶೆಟ್ಟಿಯಿಂದ ಕೊಲೆಯಾದ ಹರೀಶ್ ಪೂಜಾರಿಯೂ ಬಿಲ್ಲವನಾಗಿದ್ದಾನೆ. ಹಾಗೆಯೇ ಆದಿ ಉಡುಪಿಯಲ್ಲಿ ಕೊಲೆಗೈದು ಜೈಲು ಸೇರಿರುವ ಅಂಕಿತ್ ಪೂಜಾರಿಯೂ ಬಿಲ್ಲವ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ತನ್ನ ಸಮುದಾಯವನ್ನು ಅಸ್ಪಶ್ಯತೆಯಿಂದ ಮೇಲೆತ್ತುವುದಕ್ಕೆ, ಸಮಾಜದಲ್ಲಿ ಅವರಿಗೆ ಗಣ್ಯ ಸ್ಥಾನವನ್ನು ನೀಡುವುದಕ್ಕಾಗಿ ನಾರಾಯಣ ಗುರುಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದು ಬಿಲ್ಲವರೂ ಸೇರಿದಂತೆ, ಕೆಳವರ್ಗದ ಜನರು ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲಲು ಅವರ ಹೋರಾಟ ಕಾರಣ. ಆದರೆ ಇದೀಗ ಅದೇ ಸಮುದಾಯದ ತರುಣರು, ಮೇಲ್ಜಾತಿಯ ಸಂಚಿಗೆ ಬಲಿಯಾಗಿ ಮತ್ತೆ ಕೊಲೆಗಾರರು, ರೌಡಿಗಳು ಎಂಬ ಹಣೆಪಟ್ಟಿಕಟ್ಟಿಕೊಂಡು ಜೈಲು ಸೇರುವ ಮೂಲಕ ನಾರಾಯಣ ಗುರುಗಳಿಗೆ ಕಳಂಕ ತರುತ್ತಿದ್ದಾರೆ. ಕೆಳ ಸಮುದಾಯದ ಸಂಘಟನೆಗಳು ಇದನ್ನು ಗುರುತಿಸಿ ತಮ್ಮ ತಮ್ಮ ಸಮುದಾಯದ ತರುಣರನ್ನು ರಕ್ಷಿಸಿಕೊಳ್ಳಬೇಕಾಗಿದೆ. ಹಾಗೆಯೇ ಸಮಾಜದಲ್ಲಿ ಸ್ನೇಹ ಸೌಹಾರ್ದಗಳನ್ನು ನಾಶ ಮಾಡಲು ಹೊಂಚು ಹಾಕುತ್ತಿರುವ ರಾಜಕೀಯ ನಾಯಕರನ್ನು ಗುರುತಿಸಿ, ಅವರನ್ನು ದೂರ ಇಡುವ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X