ನದಿಗೆ ಉರುಳಿದ ಬಿಎಂಟಿಸಿ ಬಸ್: 40 ಮಂದಿಗೆ ಗಾಯ

ಬೆಂಗಳೂರು, ಫೆ.3: ತಾವರಕೆರೆಯಿಂದ ನೆಲಮಂಗಲಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಅರ್ಕಾವತಿ ನದಿಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಬಸ್ ತಡೆಗೋಡೆಗೆ ಗುದ್ದಿ ನದಿಗೆ ಉರುಳಿದ ಪರಿಣಾಮ 40ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಬಸ್ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿ ತಪ್ಪಿಸಲು ಹೋಗಿ ಅಪಘಾತಕ್ಕೆ ಈಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಬೆಂಗಳೂರಿನ ದಕ್ಷಿಣದ ತಾವರಕೆರೆ ತಾಲೂಕಿನಲ್ಲಿ ನಡೆದಿದೆ.
Next Story





