ಗಾಂಬಿಯ ಅಧ್ಯಕ್ಷರ ಪುತ್ರನ ಸಾವಿಗೆ ಕಾರಣ ವಾದ ನರಹಂತಕ ನಾಯಿ ಸೆರೆ

ಬಾನ್‌ಜುಲ್,ಫೆ.3: ಗಾಂಬಿಯ ಅಧ್ಯಕ್ಷ ಆದಮ್ ಬಾರೊರ ಎಂಟು ವರ್ಷದ ಪುತ್ರನ ಮೇಲೆ ದಾಳಿ ಮಾಡಿ ಆತನ ಸಾವಿಗೆ ಕಾರಣವಾಗಿದ್ದ ಬೀದಿ ನಾಯಿಯನ್ನು ಸೆರೆಹಿಡಿಯಲಾಗಿದೆ. ಕಳೆದ ತಿಂಗಳು ಗಾಂಬಿಯದಲ್ಲಿ ಅಧ್ಯಕ್ಷರ ಅಧಿಕಾರಹಸ್ತಾಂತರಕ್ಕೆ ಸಂಬಂಧಿಸಿ ಬಿಕ್ಕಟ್ಟು ತಾರಕಕ್ಕೇರಿದ್ದ ಸಮಯದಲ್ಲಿಯೇ ಈಗಿನ ಅಧ್ಯಕ್ಷ ಆದಮ ಬಾರೊರ ಪುತ್ರನನ್ನು ಬೀದಿನಾಯಿಯೊಂದು ಕಚ್ಚಿತ್ತು. ನಂತರ ನಾಯಿಕಡಿತದಿಂದ ಆತ ಅಸುನೀಗಿದ್ದನು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆದಮ ಬಾರೊ ಗೆದ್ದರೂ ಅಧಿಕಾರ ಹಸ್ತಾಂತರಿಸಲು ಮಾಜಿ ಅಧ್ಯಕ್ಷ ಯಹ್ಯಾ ಜಮಾ, ನಿರಾಕರಿಸಿದ್ದರಿಂದ ಗಾಂಬಿಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ನಡುವೆ ಆದಮ ಬಾರೊರ ಐವರು ಮಕ್ಕಳಲ್ಲಿ ಎಂಟು ವರ್ಷ ದ ಒಬ್ಬ ಬಾಲಕ ನಾಯಿದಾಳಿಗೆ ಬಲಿಯಾಗಿದ್ದನು. ನರಹಂತಕ ನಾಯಿಯ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅದು ಹುಚ್ಚು ನಾಯಿಯಲ್ಲ ಎಂದು ಪತ್ತೆಯಾಗಿದೆ ಎಂದು ವರದಿತಿಳಿಸಿದೆ.
Next Story





