ಎಪಿಎಂಸಿ ಅಧ್ಯಕ್ಷನ ಮೇಲೆ ಹಾಡಹಗಲೇ ಗುಂಡಿನ ದಾಳಿ
ಬೆಚ್ಚಿಬಿದ್ದ ಬೆಂಗಳೂರು
ಬೆಂಗಳೂರು, ಫೆ.3: ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲೆ ಹಾಡಹಗಲೇ ರಸ್ತೆ ಮಧ್ಯೆ ಇಬ್ಬರು ದುಷ್ಕರ್ಮಿಗಳ ತಂಡ ಗುಂಡು ಹಾರಿಸಿ ಪರಾರಿಯಾದ ಘಟನೆ ನಡೆದಿದೆ.
ಯಲಹಂಕದ ಕೋಗಿಲು ಕ್ರಾಸ್ ಸಿಗ್ನಲ್ ಬಳಿ ಶ್ರೀನಿವಾಸ್ ಪ್ರಯಾಣಿಸುತ್ತಿದ್ದ ಹೊಂಡಾ ಸಿಟಿ ಕಾರು ನಿಂತಿದ್ದಾಗ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಶ್ರೀನಿವಾಸ್‌ರನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸ್‌ರ ಕಾರು ಚಾಲಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಹರ್ಷ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story