ನೋವಿನಿಂದ ನರಳುತ್ತಿದ್ದ ಗರ್ಭಿಣಿಯಿದ್ದ ಕಾರನ್ನು ತಡೆದು ನಿಲ್ಲಿಸಿದ ಮಹಿಳೆ
ತನ್ನ ಆಡಿ ಕಾರಿಗೆ ತಾಗಿಸಿದ್ದೇ ಅಪರಾಧ

ಇಲ್ಲೊಬ್ಬಳು ಮಹಿಳೆಯಿದ್ದಾಳೆ ನೋಡಿ...ಮಾನವೀಯತೆ ಎನ್ನುವುದೂ ಒಂದು ಇದೆ ಎನ್ನುವುದನ್ನು ಈಕೆ ಸಂಪೂರ್ಣವಾಗಿ ಮರೆತಿದ್ದಾಳೆ ಎನ್ನುವುದಕ್ಕೆ ಈ ವೀಡಿಯೊವೇ ಸಾಕ್ಷಿ.
ವ್ಯಕ್ತಿಯೋರ್ವ ಹೆರಿಗೆ ನೋವಿನಿಂದ ನರಳುತ್ತಿದ್ದ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಅವಸರದಲ್ಲಿ ತನ್ನ ಕಾರನ್ನು ಈ ಮಹಿಳೆಯ ಆಡಿ ಕಾರಿಗೆ ಸ್ವಲ್ಪ ತಾಗಿಸಿದ್ದಾನೆ. ಅದೇ ದೊಡ್ಡ ಅಪರಾಧವೆಂಬಂತೆ ಮಹಿಳೆ ಆತನ ಕಾರನ್ನು ತಡೆದು ನಿಲ್ಲಿಸಿ ವಾಗ್ವಾದ ಕ್ಕಿಳಿದಿದ್ದಾಳೆ. ಕಾರಿನಲ್ಲಿ ನೋವಿನಿಂದ ವಿಲವಿಲನೆ ಒದ್ದಾಡುತ್ತಿರುವ ಗರ್ಭಿಣಿ ಕಣ್ಣಿಗೆ ಬಿದ್ದಿದ್ದರೂ ಈಕೆ ಕ್ಯಾರೇ ಎಂದಿಲ್ಲ!
ಘಾಜಿಯಾಬಾದ್-ಮೋದಿ ನಗರ ನಡುವೆ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಈ ಘಟನೆ ನಡೆದಿದೆ.
Next Story





