ಚೀನದಲ್ಲಿ ಪಟಾಕಿ ಅವಗಢ: ಒಟ್ಟು 39 ಮಂದಿ ಸಾವು

ಬೀಜಿಂಗ್,ಫೆ.3: ಚೀನದ ಹೊಸವರ್ಷ ಆಚರಣೆಯ ವೇಳೆ ವಿವಿಧ ಕಡೆ ಪಟಾಕಿ ಸಿಡಿದು 39 ಮಂದಿ ಮೃತಪಟ್ಟಿದ್ದಾರೆ. 10,523 ಮಂದಿಯನ್ನು ಅವಗಡ ಸಂಭವಿಸಿದ ಸ್ಥಳಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ವಿವಿಧ ಕಡೆ ಪಟಾಕಿ ದುರಂತದ 13,000ಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ. ಒಟ್ಟು 39 ಮಂದಿ ಸಾವನಪ್ಪಿದ್ದಾರೆ.
ಒಂದು ವಾರ ನಡೆದ ಹೊಸವರ್ಷಾಚರಣೆಯಲ್ಲಿ 13,796 ಬಾರಿ ಪಟಾಕಿ ಸುಡಲಾಗಿದೆ. ಇದಕ್ಕೆ 6.49 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಕಳೆದವರ್ಷಕ್ಕಿಂತ ಶೇ. 54ರಷ್ಟು ಕಡಿಮೆ ವೆಚ್ಚವಿದು ಎಂದು ಸಾರ್ವಜನಿಕ ಸುರಕ್ಷೆ ಸಚಿವಾಲಯ ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಸುಡುಮದ್ದು ಪ್ರಯೋಗದ ಪ್ರಮಾಣ ಮತ್ತು ಅವಗಡದ ಸಂಖ್ಯೆ, ಕ್ರಮವಾಗಿ ಶೇ.11.8 ಮತ್ತು ಶೇ.26.4ಕ್ಕೆ ಇಳಿಕೆಯಾಗಿದೆ ಎಂದು ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.
Next Story





