ಅಮ್ಮನಿಗೇ ಇರಿದು ಗಾಯಗೊಳಿಸಿದ ಮಗ !

ತಿರುವನಂತಪುರಂ,ಫೆ.3: ರಾಜಧಾನಿ ತಿರುವನಂತಪುರಂನಲ್ಲಿ ಸ್ವಂತ ಅಮ್ಮನನ್ನೇ ಪುತ್ರನೊಬ್ಬ ಇರಿದು ಗಾಯಗೊಳಿಸಿದ್ದಾನೆ. ಗೀತಾ(40) ಎಂಬ ಮಹಿಳೆ ಸ್ವಂತ ಪುತ್ರನ ದಾಳಿಯಿಂದ ಗಾಯಗೊಂಡಿದ್ದಾರೆ. ತಂಬಾನೂರಿಗೆ ಹೋಗುವ ಬಸ್‌ಸ್ಟಾಂಡ್‌ನತ್ತ ಇಬ್ಬರು ನಡೆದುಕೊಂಡು ಬರುತ್ತಿದ್ದರು. ಮಾತಾಡುತ್ತಿದ್ದ ವೇಳೆ ಹಠಾತ್ ಕೋಪಗೊಂಡ ಮಗ ತಾಯಿಯ ಕೈಯಲ್ಲಿದ್ದ ಕಂಪಾಸ್ ತೆಗೆದು ತಾಯಿಯ ಕೊರಳಿಗೆ ಇರಿದನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದನ್ನು ನೋಡಿದ ಕೂಡಲೆ ಅಲ್ಲಿದ್ದವರು ತಾಯಿಗೆ ಇರಿಯುತ್ತಿದೆ ಪುತ್ರನನ್ನು ಹಿಡಿದುಕೊಂಡಿದ್ದರು. ಆದರೂ ಪುನಃ ಅಮ್ಮನನ್ನು ಇರಿಯಲು ಆತ ಯತ್ನಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಇದೇವೇಳೆ ಕೆಎಸ್‌ಯು ಸೆಕ್ರಟರಿಯೇಟ್ ಮಾರ್ಚ್ ನಡೆಸುತ್ತಿತ್ತು. ಅಲ್ಲಿದ್ದ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ಬಂದು ಪುತ್ರನನ್ನು ಬಂಧಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಗೀತಾರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಕಾಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪುತ್ರನನ್ನು ಪ್ರಶ್ನಿಸಲಾಗಿದ್ದು ಆತ ಮಾದಕವ್ಯಸನಿ ಎಂದು ತಿಳಿದು ಬಂದಿದೆ.
ಗೀತಾ ತಿರುವನಂತಪುರಂನ ಒಂದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಪೇಯಾಡ್‌ನವರಾದ ಇವರು ಪಡೂರ್‌ಕ್ಕಡದಲ್ಲಿ ವಾಸಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.







