ಮೂಡುಬಿದಿರೆ : ಮೂಡಾ ಅಧ್ಯಕ್ಷರಾಗಿ ಸುರೇಶ್ ಪ್ರಭು ಅಧಿಕಾರ ಸ್ವೀಕಾರ

ಮೂಡುಬಿದಿರೆ , ಫೆ. 3 : ಮೂಡುಬಿದಿರೆ ನಗರವನ್ನು ಯೋಜನಬದ್ಧವಾಗಿ ರೂಪಿಸಿಕೊಂಡು ಹೋಗುವ ಮಹತ್ವದ ಪಾತ್ರವನ್ನು ಜನತೆಯ ಸಹಕಾರದೊಂದಿಗೆ ನಿರ್ವಹಿಸುತ್ತೇನೆ. ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತೇನೆ ಎಂದು ನೂತನ ಮೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸರೇಶ್ ಪ್ರಭು ಹೇಳಿದರು.
ಅವರು ಮೂಡುಬಿದಿರೆಯ ಪುರಸಭಾ ಕಚೇರಿಯ ಸಂಕೀರ್ಣದಲ್ಲಿರುವ ಮೂಡಾ ಕಚೇರಿಯಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತನಗೆ ಈ ಹುದ್ದೆಗೇರಲು ಪ್ರಮುಖ ಕಾರಣಕರ್ತರಾದ ಶಾಸಕ ಅಭಯಚಂದ್ರ ಜೈನ್ ಹಾಗೂ ತನ್ನ ರಾಜಕೀಯ ಗುರು, ಮೂಡುಬಿದಿರೆಯ ಪುರಸಭಾ ಮಾಜಿ ಅಧ್ಯಕ್ಷ ಹೆಚ್. ಪ್ರೇಮಾನಂದ ಪ್ರಭು ಕೃತಜ್ಞತೆ ಸಲ್ಲಿಸಿದ ಅವರು ಮೂಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಹಾಗೂ ಸಿಬ್ಬಂದಿಗಳ ಸಹಕಾರ, ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಶಾಸಕ ಅಭಯಚಂದ್ರ, ಎಚ್. ಪ್ರೇಮಾನಂದ ಪ್ರಭು, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಎಸ್. ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಮಾಜಿ ಅಧ್ಯಕ್ಷರಾದ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ರೂಪಾ ಎಸ್. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಪ್ರ. ಕಾರ್ಯದರ್ಶಿ ರತ್ನಾಕರ ಸಿ. ಮೊಲಿ, ಪಿ.ಕೆ. ಥಾಮಸ್, ಆಲ್ವಿನ್ ಮಿನೇಜಸ್, ಪುರಸಭಾ ಸದಸ್ಯ ದಿನೇಶ್ ಪೂಜಾರಿ, ಉದ್ಯಮಿ ಹರ್ಷವರ್ಧನ ಪಡಿವಾಳ್, ಜೊಸ್ಸಿ ಮಿನೇಜಸ್ ಮೊದಲಾದವರು ಸುರೇಶ್ ಪ್ರಭು ಅವರನ್ನು ಅಭಿನಂದಿಸಿದರು.
ಮೂಡ ಸದಸ್ಯ ಕಾರ್ಯದರ್ಶಿ ಪ್ರವೀಣ ಎ.ಎನ್. ಉಪಸ್ಥಿತರಿದ್ದರು.







