ಮಂಗಳೂರು ವಿ.ವಿ.ವೆಬ್ ಸೈಟ್ ಹ್ಯಾಕ್ ಪ್ರಕರಣ ಬಗ್ಗೆ ತನಿಖೆ : ಉಪಕುಲಪತಿ ಕೆ.ಭೈರಪ್ಪ

ಮಂಗಳೂರು.ಫೆ.3: ಮಂಗಳೂರು ವಿಶ್ವ ವಿದ್ಯಾನಿಲಯ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುವ ಮೊದಲೇ ಪದವಿ ಫಲಿತಾಂಶ ಬಹಿರಂಗ ಗೊಂಡಿರುವುದು ಹೇಗೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ವೆಬ್ ಸೈಟ್‌ನಲ್ಲಿ ಅಧಿಕೃತವಾಗಿ ಫಲಿತಾಂಶ ಜನವರಿ 23ರಂದು ಪ್ರಕಟಗೊಂಡಿದ್ದು , ಆದರೆ ಅದಕ್ಕಿಂತ ಮುಂಚಿತವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ವೆಬ್ ಸೈಟ್ ಹೆಸರಿನಲ್ಲಿ ಖಾಸಗಿ ವೆಬ್ ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು ಇದು ವಿಶ್ವ ವಿದ್ಯಾನಿಲಯದ ಗಮನಕ್ಕೆ ಬರುತ್ತಲೆ ವೆಬ್ ಸೈಟನ್ನು ಬ್ಲಾಕ್ ಮಾಡಲಾಗಿತ್ತು . ಈ ನಡುವೆ ಕೆಲವರು ಫಲಿತಾಂಶವನ್ನು ಗಮನಿಸಿದ್ದರು. ವಿಶ್ವ ವಿದ್ಯಾನಿಲಯದ ಮೂಲಕ ಅಧಿಕೃತವಾಗಿ ಫಲಿತಾಂಶ ಹೇಗೆ ಪ್ರಕಟಗೊಂಡಿದೆ ಎನ್ನುವ ಬಗ್ಗೆ ತನಿಖೆಗೆ ನಡೆಸಲು ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪಿ.ಎ.ಖಾನ್ ತಿಳಿಸಿದ್ದಾರೆ.
Next Story





