ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಸಾಹಿತಿ ಅಶೋಕ್
ಮಂಗಳೂರು, ಫೆ. 3: ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕೆಂದು ಬಯಸಿ ಹೆತ್ತವರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಯಾವ ಕ್ಷೇತ್ರದಲ್ಲಿ ಅವರಿಗೆ ಅಭಿರುಚಿ ಮತ್ತು ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಹೇಳಿದ್ದಾರೆ.
ಅವರು ಕೊಂಚಾಡಿ ರಾಮಾಶ್ರಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಇಂಟರ‍್ಯಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ನಡೆದ ವಿದ್ಯಾರ್ಥಿಗಳಿಗೆ ‘ಉದ್ಯೋಗ ಮಾರ್ಗದರ್ಶನ’ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಂಗಳೂರು ಡೌನ್‌ಟೌನ್ ಯೂತ್ ಸರ್ವಿಸ್ ಡೈರೆಕ್ಟರ್ ರೊಟೇರಿಯನ್ ನಾಗರಾಜ್ ಕಾಮತ್, ಝೋನಲ್ ಲೆಫ್ಟಿನೆಂಟ್ ಏಕನಾಥ ದಂಡೆಕೇರಿ, ಕಾರ್ಯದರ್ಶಿ ರೊಟೇರಿಯನ್ ಸೂರಜ್ ಹೆಬ್ಬಾರ್ ಹಾಗೂ ಪ್ರಾಂಶುಪಾಲೆ ಕಿಶೋರಿ ಕೆ.ಎಸ್. ಉಪಸ್ಥಿತರಿದ್ದರು.
ಶ್ರದ್ಧಾ ಮ್ತು ಮಮತಾ ಪ್ರಾರ್ಥಿಸಿದರು. ನವಿತಾ ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್‌ನ ಅಧ್ಯಕ್ಷೆ ಪಲ್ಲವಿ ಸ್ವಾಗತಿಸಿದರು , ಕಾರ್ಯದರ್ಶಿ ನೀಲಪ್ಪ ವಂದಿಸಿದರು.





