ಸೌದಿ: ನಾಗರಿಕ ಖಾತೆಗೆ ನೋಂದಾಯಿಸಿದವರ ಸಂಖ್ಯೆ 14 ಲಕ್ಷ

ಜಿದ್ದಾ, ಫೆ. 3: ಸೌದಿ ಅರೇಬಿಯದ ವಿನೂತನ ‘ನಾಗರಿಕರ ಖಾತೆ ಕಾರ್ಯಕ್ರಮ’ಕ್ಕೆ ಭಾರೀ ಪ್ರತಿಕ್ರಿಯ ವ್ಯಕ್ತವಾಗಿದೆ. ಅರ್ಜಿ ಸಲ್ಲಿಸುವ ವೆಬ್‌ಸೈಟ್ ಆರಂಭಗೊಂಡ ಕೇವಲ ಎರಡೇ ದಿನದಲ್ಲಿ 14 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸಂಪರ್ಕ ಕೇಂದ್ರವು ಫಲಾನುಭವಿಗಳ ಪ್ರಶ್ನೆಗಳನ್ನು ಸ್ವೀಕರಿಸುವುದನ್ನು ಫೆಬ್ರವರಿ 1ರಿಂದ ಆರಂಭಿಸಿದೆ. 365ಕ್ಕೂ ಅಧಿಕ ಉಸ್ತುವಾರಿಗಳು ಮತ್ತು ಸಂಪರ್ಕಾಧಿಕಾರಿಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ.
ಕೇಂದ್ರವು ಮೊದಲ ದಿನದಂದು 25,000 ಕರೆಗಳನ್ನು ಸ್ವೀಕರಿಸಿತು ಎಂದು ಅದು ಗುರುವಾರ ಟ್ವಿಟರ್‌ನಲ್ಲಿ ಹೇಳಿದೆ.
ಫೆಬ್ರವರಿ ಒಂದರಂದು ಇಲೆಕ್ಟ್ರಾನಿಕ್ ವೆಬ್‌ಸೈಟ್‌ನಲ್ಲಿ 10,54,589 ಖಾತೆಗಳು ಸೃಷ್ಟಿಯಾದವು ಹಾಗೂ ಗುರುವಾರ ಸಂಜೆಯ ವೇಳೆಗೆ ಬಂದ ಅರ್ಜಿಗಳ ಸಂಖ್ಯೆ 14 ಲಕ್ಷವನ್ನು ಮೀರಿತು.
ನೋಂದಾವಣೆಯ ವೇಳೆ, ಅರ್ಜಿದಾರರು ಎಲ್ಲ ರೀತಿಯ ಆದಾಯ ಮೂಲಗಳ ಮಾಹಿತಿ ನೀಡಬೇಕಾಗುತ್ತದೆ.
Next Story





