ಅಂಕಿತ್ ಪೂಜಾರಿ 3 ದಿನ ಪೊಲೀಸ್ ಕಸ್ಟಡಿಗೆ
ಉಡುಪಿ, ಫೆ.3 : ಆದಿ ಉಡುಪಿ ಮಸೀದಿ ಕಲ್ಲೆಸೆತ ಹಾಗೂ ರಿಕ್ಷಾ ಚಾಲಕ ಹನೀಫ್ ಕೊಲೆ ಪ್ರಕರಣದ ಆರೋಪಿ ಅಂಕಿತ್ ಪೂಜಾರಿಯನ್ನು ಉಡುಪಿ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಕೊಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಪ್ರಕರಣದ ತನಿಖಾಧಿಕಾರಿ ಯಾಗಿರುವ ಉಡುಪಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಉಡುಪಿ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶ ಶಿವರಾಮ್ ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಈತನನ್ನು ಮತ್ತೆ ಫೆ.6 ರಂದು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಅಂಕಿತ್ ಪೂಜಾರಿಯನ್ನು ಪೊಲೀಸರು ಹನೀಫ್ ಕೊಲೆ ಪ್ರಕರಣದಲ್ಲಿ ಬಂಧಿಸಿರುವುದರಿಂದ ಮಸೀದಿ ಕಲ್ಲೆಸೆತ ಪ್ರಕರಣದ ತನಿಖೆಗೆ ಬಾಡಿ ವಾರೆಂಟ್ ಮೂಲಕ ಮತ್ತೆ ವಶಕ್ಕೆ ಪಡೆಯಲಿದ್ದಾರೆ. ಅದಕ್ಕಾಗಿ ನ್ಯಾಯಾ ಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದ ವಿಚಾರಣೆ ಫೆ.6ರಂದು ನಡೆಯಲಿದೆ.
Next Story





