ಸಂದೇಹಾಸ್ಪದ ಠೇವಣಿಯಿರಿಸಿದ 13 ಲಕ್ಷ ಮಂದಿಗೆ ಇಮೇಲ್ ನೋಟಿಸ್
ಹೊಸದಿಲ್ಲಿ, ಫೆ.3: ನಗದು ಅಮಾನ್ಯದ ಆನಂತರ ಒಟ್ಟು 4.17 ಲಕ್ಷ ಕೋಟಿಗೂ ಅಧಿಕ ಮೊತ್ತದ ಶಂಕಾಸ್ಪದ ನಗದನ್ನು ಠೇವಣಿಯಿರಿಸಿದವರಲ್ಲಿ 13 ಲಕ್ಷ ಮಂದಿಗೆ ವಿವರಣೆ ಕೇಳಿ ಇಮೇಲ್, ಎಸ್‌ಎಂಎಸ್ ಮೂಲಕ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಗುರುವಾರ ತಿಳಿಸಿದ್ದಾರೆ.
ಈ ಶಂಕಿತ ನಗದನ್ನು ಠೇವಣಿಯಿರಿಸಿದವರ ದತ್ತಾಂಶಗಳು ಆದಾಯ ತೆರಿಗೆ ಇಲಾಖೆಗೆ ಲಭ್ಯವಾಗಿದ್ದು, ಅವರೆಲ್ಲರಿಗೂ ವಿವರಣೆ ಕೇಳಿ ಇಮೇಲ್ ಹಾಗೂ ಎಸ್‌ಎಂಎಸ್ ಸಂದೇಶಗಳನ್ನು ರವಾನಿಸಲಾಗಿದೆ ಎಂದವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ಬಜೆಟ್ ಆನಂತರದ ವಿಚಾರಸಂಕಿರಣವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಒಟ್ಟು 4.17 ಲಕ್ಷ ಕೋಟಿ ರೂ. ಮೊತ್ತದ ಠೇವಣಿಯಿರಿಸಿದ 18 ಲಕ್ಷ ಮಂದಿಯ ಪೈಕಿ 13 ಲಕ್ಷ ಮಂದಿಗೆ ವಿವರಣೆ ಕೇಳಿ ಇಮೇಲ್,ಎಸ್‌ಎಂಎಸ್ ಕಳುಹಿಸಲಾಗಿದ್ದು, ಉಳಿದ 5 ಲಕ್ಷ ಮಂದಿಯ ಶುಕ್ರವಾರದಂದು ಇಲಾಖೆಯಿಂದ ಅಧಿಸೂಚನೆಯನ್ನು ಪಡೆಯಲಿದ್ದಾರೆ ಎಂದರು.
Next Story





