ಐವರ್ನಾಡು ದರೋಡೆ ಪ್ರಕರಣ: ಆರೋಪಿಗಳ ಬಂಧನ
ಸುಳ್ಯ, ೆ.3: ಐವರ್ನಾಡಿನಲ್ಲಿ ನಡೆದ ಕಾರು ದರೋಡೆ ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಸಿದ್ದಾರೆ. ಗುತ್ತಿಗಾರಿನಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಬೆಳ್ಳಾರೆಯ ಅಬ್ದುಲ್ ಖಾದರ್ ಬಯಂಬಾಡಿ ಎಂಬವರು ಬೆಳ್ಳಾರೆಯಿಂದ ಗುತ್ತಿಗಾರಿಗೆ ತೆರಳುತ್ತಿದ್ದಾಗ ಐವರ್ನಾಡಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ ಕಾರಲ್ಲಿದ್ದ 5 ಲಕ್ಷ ರೂ. ನಗದು ಹಾಗೂ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದರು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಶಾರ್ಪ್ ಶೂಟರ್ ದಿನೇಶ್ ಶೆಟ್ಟಿ ಎಂಬಾತನ ಪರಾರಿಗೆ ಸಹಕರಿಸುವ ಉದ್ದೇಶದಿಂದ ಅಲ್ಲಿಗೆ ತೆರಲಿದ್ದ 6 ಮಂದಿಯನ್ನು ಪೊಲೀಸರು ಬಂಸಿದ್ದರು. ಅವರು ಐವರ್ನಾಡಿನಲ್ಲಿ ದರೋಡೆ ನಡೆಸಿದ್ದನ್ನು ಈ ಸಂದರ್ಭ ಹೇಳಿದ್ದಾರೆ. ಅವರ ಬಳಿಯಿದ್ದ ಪಿಸ್ತೂಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂತ ಬೆಳಂದೂರು ಗ್ರಾಮದ ಮುಹಮ್ಮದ್ ಹನ್ೀ, ಅಬ್ದುಲ್ ಕರೀಂ, ಬೆಂಗಳೂರಿನ ತಾಹಿರ್ ಹುಸೈೀನ್, ಮುಂಬೈಯ ಅವಿನಾಶ್ ಮಾರ್ಕೆ, ಅಹ್ಮದ್ ಸೈಯದ್, ರಹ್ಮಾನ್ ಅವರನ್ನು ಅಲ್ಲಿನ ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ತಮ್ಮ ವಶಕ್ಕೆ ಪಡೆದ ಬಳಿಕ ದರೋಡೆ ಕೃತ್ಯದ ಪೂರ್ಣ ವಿವರ ಬಯಲಿಗೆ ಬರಲಿದೆ.





