ರೈಲ್ವೆ ಹೆಸರಲ್ಲಿ 68 ಲಕ್ಷ ರೂ. ವಂಚಿಸಿದ ತಮಿಳ್ನಾಡಿನ ವ್ಯಕ್ತಿಯ ಬಂಧನ

ಪೆರಿಂದಲ್ ಮಣ್ಣ, ಫೆ.4: ರೈಲ್ವೆಯಿಂದ ಅಂಗೀಕೃತ ರೈಲ್ ಸೇಫ್ಟಿ ಡಿಪ್ಲೊಮಾ, ಡಿಗ್ರಿ ಕೋರ್ಸ್‌ಗಳಿಗೆ ಆಲ್ ಇಂಡಿಯ ರೈಲ್ ಸೇಫ್ಟಿ ಕೌನ್ಸಿಲ್‌ನ(ಎಐಆರ್‌ಎಸಸಿ) ಅಧೀನ ಆಂಭಿಸಲಾಗುವ ಕೋರ್ಸ್‌ಗಳನ್ನು ನಡೆಸಲು ವಿವಿಧ ಪ್ರದೇಶಗಳಲ್ಲಿ ಪ್ರಾಂಚೈಸಿ ನೀಡಲಾಗುವುದುಎಂದು ನಂಬಿಕೆ ಹುಟ್ಟಿಸಿ 68 ಲಕ್ಷ ರೂಪಾಯಿ ವಂಚಿಸಿದ ತಮಿಳ್ನಾಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಎಂ.ಪಿ. ಮೋಹನ ಚಂದ್ರರ ನೇತೃತ್ವದಲ್ಲಿಪೊಲೀಸರು ಆರೋಪಿ ತಮಿಳ್ನಾಡಿನ ಕುಂಭಕೋಣಂನ ರಾಜರಾಜನಗರ್ ಪದ್ಮನಾಭ(54) ಎಂಬಾತನನ್ನು ಬಂಧಿಸಿದ್ದಾರೆ. ಡಿವೈಎಸ್ಪಿಗೆ ಸಿಕ್ಕಿದ ದೂರಿನ ಆಧಾರದಲ್ಲಿ ಈತನನ್ನು ತಮಿಳ್ನಾಡಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರು, ಚೆನ್ನೈ, ಮುಂಬೈ ಮುಂತಾದ ನಗರಗಳನ್ನು ಕೇಂದ್ರೀಕರಿಸಿ ದೇಶಾದ್ಯಂತ 2010ರಿಂದ ಇದೇ ರೀತಿ ವಂಚನೆ ನಡೆಸುತ್ತಾ ಬಂದಿದ್ದೇನೆಂದು ಆರೋಪಿ ವಿಚಾರಣೆವೇಳೆ ತಪ್ಪೊಪ್ಪಿಕೊಂಡಿದ್ದಾನೆ. 2012ರಲ್ಲಿ ಇದೇ ಆರೋಪದಡಿಯಲ್ಲಿ ಈತನನ್ನು ಬಂಧಿಸಲಾಗಿತ್ತು. ಎಐಅರ್‌ಎಸ್‌ಸಿ ಸಾಮಾಜಿಕ ಸೇವಾ ಸಂಘಟನೆಯಾಗಿ ನೋಂದಾವಣೆಗೊಂಡಿದೆ.ವಿದ್ಯಾಸಂಸ್ಥೆಗಳನ್ನಾಗಲಿ ಕೋರ್ಸ್‌ಗಳನ್ನಾಗಲಿ ನಡೆಸುವ ಅನುಮತಿ ಅದಕ್ಕಿಲ್ಲ. ತನ್ನದೇ ವೆಬ್‌ಸೈಟ್ ಮಾಡಿ ಪದ್ಮನಾಭನ್ ತನ್ನನ್ನು ಚೇರ್‌ಮೆನ್ ಎಂದು ಕರೆದುಕೊಂಡಿದ್ದ. ಪ್ರಾಂಚೈಸಿ ನೀಡಲಾಗುವುದು ಎಂದು ಪ್ರಚಾರ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ್ದಾನೆ. ಪೆರಿಂದಲ್ ಮಣ್ಣ ಸಿ.ಐ. ಸಾಜು ಕೆ. ಅಬ್ರಹಾಂ, ಎಸ್ಸೈ ಎಂ.ಸಿ. ಪ್ರಮೋದ್, ಶಾಡೋಪೊಲೀಸ್‌ನ ದಿನೇಶ್ ಮುಂತಾದವರು ಚೆನ್ನೈಯಲ್ಲಿ ಅಡಗಿಕೂತಿದ್ದ ಆತನನ್ನು ಬಂಧಿಸಿ ಕರೆತಂದಿದ್ದಾರೆ. ಆರೋಪಿಗೆ ಕೋರ್ಟು ನ್ಯಾಯಾಂಗ ಬಂಧನ ವಿಧಿಸಿದೆ.







