ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಣೆ

ಮಂಗಳೂರು, ಫೆ.4: ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅರ್ಜಿದಾರರಾದ ಪ್ರಶಾಂತ್ ಪಾಲೇಕಾರ್ ಕೋಡಿಕಲ್ ಅವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಲಕ್ಷ ರೂ.ನ ಚೆಕ್ ಅನ್ನು ಅವರ ಮನೆಗೆ ತೆರಳಿ ಐವನ್ ಡಿಸೋಜ ವಿತರಿಸಿದರು.
ಈ ಸಂದರ್ಭದಲ್ಲಿ ಕೇಶವ ಸನಿಲ್, ಚಂದ್ರ ಕಲ್ಪನೆ, ಚೇತನ್ ಉರ್ವಾ, ಪೃಥ್ವಿರಾಜ್ ಗುರುಪುರ, ಪ್ರವೀಣ್ ಕೋಡಿಕಲ್, ಸತೀಶ್ ಪೂಜಾರಿ ಅಶೋಕ್ ನಗರ, ಮಹೇಶ್ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.
Next Story





