ವಳಚ್ಚಿಲ್ ಪದವು ಜುಮಾ ಮಸೀದಿಯ ನೂತನ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಫೆ.4: ವಳಚ್ಚಿಲ್ ಪದವು ಅಲ್ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಮಸೀದಿಯ ಖತೀಬ್ ಟಿ.ಕೆ.ಇಸ್ಮಾಯೀಲ್ ಮದನಿ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಜುಮಾ ಮಸೀದಿಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್, ಉಪಾಧ್ಯಕ್ಷರಾಗಿ ಶಬೀರ್, ಕಾರ್ಯದರ್ಶಿಯಾಗಿ ಮುಶ್ತಾಕ್, ಖಜಾಂಚಿಯಾಗಿ ಇಲ್ಯಾಸ್, ಮದ್ರಸ ಖಜಾಂಚಿಯಾಗಿ ಮನ್ಸೂರ್, ಜೊತೆ ಕಾರ್ಯದರ್ಶಿಯಾಗಿ ಅಕ್ರಂ ಸವಾದ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.
Next Story





