ಒಂದು ದಿನವಾದರೂ ಹಸಿದು ಗೊತ್ತಿದೆಯೇ: ಟ್ರಂಪ್‌ಗೆ ಸಿರಿಯದ ಬಾಲಕಿಯ ಪ್ರಶ್ನೆ

ಇಸ್ತಾಂಬುಲ್,ಫೆ.4: ಆಹಾರ ಸೇವಿಸದೆ ಒಂದುದಿವಸ ಪೂರ್ತಿ ಇದ್ದದಿದೆಯೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಿರಿಯದ ಏಳರ ಹರೆಯದ ಬಾಲಕಿ ಬನಾ ಅಲ್ ಅಬೆದ್ ಪ್ರಶ್ನಿಸಿದ್ದು, ಇದೀಗ ಟ್ವಿಟರ್‌ನಲ್ಲಿ ವೈರಲಾಗಿದೆ.
ಸಿರಿಯ ಸಹಿತ ಏಳು ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶ ನಿಷೇಧಿಸಿದ ಡೊನಾಲ್ಡ್ ಟ್ರಂಪ್ ಸರಕಾರದಕ್ರಮವನ್ನು ಬನಾ ಅಲ್ ಅಬೆದ್ ಪ್ರಶ್ನಿಸಿದ್ದಾಳೆ. ಸಿರಿಯದ ನಿರಾಶ್ರಿತರು ಮತ್ತು ಮಕ್ಕಳ ಕುರಿತು ನೀವು ಚಿಂತಿಸಬೇಕೆಂದು ಬನಾ ಟ್ರಂಪ್‌ರನ್ನು ಟ್ವಿಟರ್ ಮೂಲಕ ನಂತರ ಆಗ್ರಹಿಸಿದ್ದಾಳೆ.
ಈಹಿಂದೆ ವಲಸೆ ನಿಷೇಧ ಆದೇಶವನ್ನು ಟ್ವಿಟರ್‌ನಲ್ಲಿ ವಿರೋಧಿಸಿ ಪ್ರತಿಕ್ರಿಯೆ ನೀಡಿದ್ದಳು. ತಾನು ಭಯೋತ್ಪಾದಕಿಯೇ ಎಂದು ಅವಳು ಕೇಳಿದ್ದಳು. ನಿಷೇಧ ಉತ್ತಮವೇ ಎಂದು ಅಭಿಪ್ರಾಯ ನಿಮಗಿದ್ದರೆ ಇತರ ದೇಶಗಳನ್ನು ಶಾಂತಿಯ ದಾರಿಗೆ ಕರೆತನ್ನಿ ಎಂದು ಟ್ರಂಪ್‌ರೊಂದಿಗೆ ಅವಳು ಆಗ್ರಹಿಸಿದ್ದಳು.
ಯುದ್ಧದಿಂದ ನಾಶವಾದ ಅಲೆಪ್ಪೊದ ಸುದ್ದಿಗಳನ್ನು ಹೊರಜಗತ್ತಿಗೆ ತಿಳಿಸುವ ಮೂಲಕ ಬನಾ ಜಾಗತಿಕ ಗಮನ ಸೆಳೆದಿದ್ದಳು. ಬಾಂಬುದಾಳಿಯಲ್ಲಿ ತನ್ನ ಮನೆ ನಾಶವಾಗಿದ್ದು, ಜೀವ ಅಪಾಯದಲ್ಲಿರವ ವಿಶಯವನ್ನು ಬನಾ ಟ್ವಿಟರ್ ಮೂಲಕ ತಿಳಿಸಿದ್ದಳು. ನಂತರ ಟರ್ಕಿ ಅಧ್ಯಕ್ಷ ಎರ್ದೋಗಾನ್ ಬಾಲಕಿಮತ್ತು ಆಕೆಯ ತಾಯಿಯನ್ನು ಸುರಕ್ಷಿತವಾಗಿ ಟರ್ಕಿಗೆ ತಲುಪುವ ವ್ಯವಸ್ಥೆ ಮಾಡಿದ್ದರು ಎಂದು ವರದಿ ತಿಳಿಸಿದೆ.
my video to Trump. " Mr @realdonaldtrump have u ever had no food & water for 24 hrs? Just think of refugees & the children of Syria." pic.twitter.com/qbaZGp0MvB
— Bana Alabed (@AlabedBana) February 1, 2017







