ನಾಪತ್ತೆಯಾಗಿದ್ದ ಯುವಕನ ಅಸ್ಢಿಪಂಜರ ಪತ್ತೆ
.gif)
ಕಾಸರಗೋಡು, ಫೆ.4: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ತಲೆಬುರುಡೆ ಮತ್ತು ದೇಹದ ಇತರ ಅಸ್ಥಿಗಳು ಚಟ್ಟಂಚಾಲ್ ನ ಖಾಸಗಿ ವ್ಯಕ್ತಿಯೋರ್ವರ ತೆಂಗಿನ ಹಿತ್ತಿಲಿನಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಚಟ್ಟಂಚಾಲ್ ಕಾವು೦ಬಲ ಉಕ್ರಂಪಾಡಿಯ ಸುನೀಲ್ ಕುಮಾರ್ (೩೨) ಮೃತಪಟ್ಟವರು.
ಮೂರು ತಿಂಗಳ ಹಿಂದೆ ಮನೆಯಿಂದ ತೆರಳಿದ್ದ ಸುನೀಲ್ ಕುಮಾರ್ ಬಳಿಕ ನಾಪತ್ತೆಯಾಗಿದ್ದರು.
ಇದೀಗ ಚಟ್ಟಂಚಾಲ್ - ಪಾದೂರು ರಸ್ತೆಯ ಗುತ್ತಿಗೆದಾರರೋರ್ವರ ಹಿತ್ತಿಲಿನಲ್ಲಿ ಅವರ ತಲೆಬುರುಡೆ ಪತ್ತೆಯಾಗಿದೆ.
ಕಾರ್ಮಿಕರು ತೆಂಗಿನ ಹಿತ್ತಿಲಿಗೆ ನೀರು ಹಾಯಿಸಲು ಬಂದ ಸಂದರ್ಭದಲ್ಲಿ ತಲೆಬುರುಡೆ ಗಮನಿಸಿ ವಿದ್ಯಾನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತಲೆಬುರುಡೆಯನ್ನು ಪರಿಶೀಲಿಸಿದ್ದು, ಪರಿಸರದಲ್ಲಿ ತಪಾಸಣೆ ನಡೆಸಿದಾಗ ದೇಹದ ಇತರ ಅವಶೇಷಗಳು ಪತ್ತೆಯಾಗಿವೆ.
ಬಳಿಕ ಪೊಲೀಸರು ನಡೆಸಿದ ತನಿಖೆಯಿಂದ ಈ ಅಸ್ಥಿಪಂಜರ ಸುನೀಲ್ ನದ್ದು ಎಂದು ತಿಳಿದುಬಂತು.
ಅಲ್ಲೇ ಸಮೀಪ ಮರದಡಿಯಲ್ಲಿ ಈತನ ಮೊಬೈಲ್ ಮತ್ತು ಚಪ್ಪಲಿ, ಶರ್ಟ್ ಪತ್ತೆಯಾಗಿದೆ. ಇದು ಸುನೀಲ್ ಕುಮಾರ್ ಅವರದೆಂದು ಮನೆಯವರು ಖಚಿತಪಡಿಸಿದ್ದಾರೆ.
ಆತ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅವಶೇಷಗಳನ್ನು ಫಾರೆನ್ಸಿಕ್ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀಲ್ ನಾಪತ್ತೆ ಕುರಿತು ಮನೆಯವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ತೆಂಗು ಕಾರ್ಮಿಕರಾಗಿದ್ದ ಸುನೀಲ್ ಕುಮಾರ್ ರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







